ಅಮೆರಿಕಕ್ಕೆ ಹೋಗ್ತೀನಂತ ಹೋದವಳು ಪ್ರಿಯಕರನ ಸಹವಾಸ ಮಾಡಿ ಸಾವಪ್ಪಿದಳು; ಗೆಳತಿ ಸಮಾಧಿಯನ್ನೇ ಬೆಡ್ ಮಾಡಿಕೊಂಡ ವಿಕೃತ ಪ್ರೇಮಿ

ಭೋಪಾಲ್‌: ಲಿವ್‌ ಇನ್‌ ಸಂಗಾತಿಯನ್ನು ಹತ್ಯೆ ಮಾಡಿದ ಬಳಿಕ ಆಕೆಯನ್ನು ಮನೆಯಲ್ಲೇ ಸಮಾಧಿ ಮಾಡಿ, ಆ ಜಾಗ​ದಲ್ಲಿ ಕಾಂಕ್ರೀ​ಟ್‌'ನ ಮಂಚ ಮಾಡಿ​ಕೊಂಡ ಪ್ರೇಮಿ​ಯೊಬ್ಬ ಅದರ ಮೇಲೇ ಮಲಗುತ್ತಿದ್ದ ಪ್ರಕರಣ​ವೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.

ಪ.ಬಂಗಾಳ ಮೂಲದ ಆಕಾಂಕ್ಷಾ ಶರ್ಮಾ ಮತ್ತು ಭೋಪಾಲ್‌ ಮೂಲದ ಉದ್ಯಾನ್‌ ದಾಸ್‌ 2 ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗಿದ್ದರು. ಈ ನಡುವೆ, 2 ವರ್ಷ ಕಾಲ ಅಮೆರಿಕಕ್ಕೆ ತೆರಳುವುದಾಗಿ ತಿಳಿಸಿ ಹೋಗಿದ್ದ ಆಕಾಂಕ್ಷಾ ಭೋಪಾಲ್‌ಗೆ ಬಂದು ಉದ್ಯಾನ್‌ ಜೊತೆ ನೆಲೆಸಿದ್ದಳು. ಭೋಪಾಲ್‌ಗೆ ಬಂದು ನೆಲೆಸಿದ್ದರೂ, ಕುಟುಂಬ ಸದಸ್ಯರಿಗೆ ಆಗ್ಗಾಗ್ಗೆ ಕರೆ ಮಾಡುತ್ತಿದ್ದ ಆಕಾಂಕ್ಷಾಳಿಂದ 2 ತಿಂಗಳಿಂದ ಕರೆ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು, ಈ ಬಗ್ಗೆ ದೂರು ಸಲ್ಲಿಸಿದ್ದರು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು, ಆಕಾಂಕ್ಷಾ ಪೋಷಕರಿಗೆ ಬಂದಿರುವ ಎಲ್ಲ ಕರೆಗಳು ಭೋಪಾಲ್‌ನಿಂದ ಬಂದಿರುವುದನ್ನು ಪತ್ತೆ ಹಚ್ಚಿ ಆರೋಪಿ ದಾಸ್‌ನನ್ನು ವಿಚಾರಣೆಗೊಳಪಡಿಸಿದ್ದಾರೆ.

ವಿಚಾರಣೆ ವೇಳೆ ತಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಬಂದು, ಆಕೆಯನ್ನು ಹತ್ಯೆ ಮಾಡಿದ್ದೆ. ಬಳಿಕ ಮರದ ಪೆಟ್ಟಿಗೆಯಲ್ಲಿ ಶವ ಹಾಕಿ, ಅದರ ಮೇಲೆ ಕಾಂಕ್ರೀಟ್‌ ಸುರಿದು ಮಂಚದ ರೀತಿಯಲ್ಲಿ ಮಾಡಿಕೊಂಡಿದ್ದೆ ಎಂದು ಉದ್ಯಾನ್‌ ಬಹಿರಂಗಪಡಿಸಿದ್ದಾನೆ.

epaper.kannadaprabha.in