ಬೈಕ್‌ನಲ್ಲಿ ಪಯಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಹಾರ್ಟ್ ಅಟ್ಯಾಕ್ ಆಗಿ, ಕುಸಿದು ಬಿದ್ದಾಗ, ಅಲ್ಲಿಯೇ ಇದ್ದ ಹೋಂ ಗಾರ್ಡ್ ಒಬ್ಬರು ಸಿಪಿಆರ್ ಮಾಡಿ ಜೀವ ಉಳಿಸಿದ್ದಾರೆ.  ಹೋಂ ಗಾರ್ಡ್‌ಗಳ ಈ ಕಾರ್ಯಕ್ಕೆ ಅಪಾರ ಶ್ಲಾಘನೆ ವ್ಯಕ್ತವಾಗಿದೆ.

ಹೈದರಾಬಾದ್: ಬೈಕ್‌ನಲ್ಲಿ ಪಯಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಹಾರ್ಟ್ ಅಟ್ಯಾಕ್ ಆಗಿ, ಕುಸಿದು ಬಿದ್ದಾಗ, ಅಲ್ಲಿಯೇ ಇದ್ದ ಹೋಂ ಗಾರ್ಡ್ ಒಬ್ಬರು ಸಿಪಿಆರ್ ಮಾಡಿ ಜೀವ ಉಳಿಸಿದ್ದಾರೆ. ಹೋಂ ಗಾರ್ಡ್‌ಗಳ ಈ ಕಾರ್ಯಕ್ಕೆ ಅಪಾರ ಶ್ಲಾಘನೆ ವ್ಯಕ್ತವಾಗಿದೆ.

ಈ ಬಗ್ಗೆ ತೆಲಂಗಾಣದ ಸ್ಥಳೀಯಾಡಳಿತ ಹಾಗೂ ನಗರಾಭಿವೃದ್ಧಿ ಸಚಿವ ಕೆ.ಟಿ.ರಾಮ್‌ರಾವ್ ಸಹ ಟ್ವೀಟ್ ಮಾಡಿದ್ದು, ಬಹದೂರ್‌ಪುರ ಠಾಣೆಯ ಹೋಂ ಗಾರ್ಡ್ ಕೆ. ಚಂದನ್ ಮತ್ತು ಇನಾಯುಥುಲ್ಲಾ ಖಾನ್ ಅವರನ್ನು ಅಭಿನಂದಿಸಿದ್ದಾರೆ.

Scroll to load tweet…

ಹೈದರಾಬಾದ್‌ನಲ್ಲಿ ಬಹುತೇಕ ಪೊಲೀಸ್ ಪೇದೆಗಳು ಹಾಗೂ ಹೋಮ್ ಗಾರ್ಡ್ಸ್ ಈ ಸಿಪಿಆರ್ ತರಬೇತಿ ಪಡೆದಿದ್ದಾರೆ. ಶಾಲಾ, ಕಾಲೇಜು ಹಾಗೂ ಇತರೆಡೆ ಇಂಥ ತರಬೇತಿ ನೀಡಿದರೆ, ಅನೇಕರ ಜೀವ ಉಳಿಸಲೂ ಸಹಾಯವಾಗಬಹುದು.

Scroll to load tweet…

ಏನಿದು ಸಿಪಿಆರ್?

ಕಾರ್ಡಿಯೋ ಪಲ್ಮನರಿ ರಿಸಸಿಟೇಷನ್ (ಸಿಪಿಆರ್) ಎಂಬುವುದು ವ್ಯಕ್ತಿಯೊಬ್ಬರು ಹೃದಯಾಘಾತ ಅಥವಾ ಯಾವುದೇ ಉಸಿರಾಟದ ತೊಂದರೆ ಅನುಭವಿಸಿದಾಗ ನೀಡುವ ಪ್ರಥಮ ಚಿಕಿತ್ಸೆ. ಹೃದಯ ಬಹುತೇಕ ಸ್ಥಗಿತಗೊಂಡತಾದರೂ, ಈ ಚಿಕಿತ್ಸೆ ನೀಡುವುದರಿಂದ ರೋಗಿ ಸುಧಾರಿಸಿಕೊಳ್ಳುತ್ತಾನೆ. ಆ ನಂತರ ಆ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿದಲ್ಲಿ, ಸುಧಾರಿಸಿಕೊಳ್ಳುತ್ತಾರೆ. ತುರ್ತು ಸಂದರ್ಭದಲ್ಲಿ ಈ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ನಾಳಗಳು ಸಂಕುಚಿತಗೊಂಡು ಉಸಿರಾಟದ ತೊಂದರೆ ಅನುಭವಿಸುತ್ತಿರುವಾಗ ಈ ಚಿಕಿತ್ಸೆ ನೀಡಿದರೆ, ತಕ್ಷಣವೇ ರಿಲ್ಯಾಕ್ಸ್ ಆಗುತ್ತಾನೆ. ಆಸ್ಪತ್ರೆಗೆ ಸಾಗಿಸುವಷ್ಟು ಸಮಯ ಸಿಗುವುದರಿಂದ ಮನುಷ್ಯ ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತದೆ.