ಕುಡಿದ ಮತ್ತಲ್ಲಿ ಕ್ಯಾಬ್‌ ಬುಕ್‌ ಮಾಡಿ, 1 ಲಕ್ಷ ಬಿಲ್‌ ಕೊಟ್ಟ

Man Give 1 Lakh Bill To Cab
Highlights

ಕುಡಿದು ವಾಹನ ಚಾಲನೆ ಮಾಡುವುದು ಅಪಾಯಕ್ಕೆ ಆಹ್ವಾನ ಎಂಬ ಎಚ್ಚರಿಕೆ ಸಂದೇಶವನ್ನು ಕೇಳುತ್ತಲೇ ಇರುತ್ತೇವೆ. ಆದರೆ, ಈ ಪ್ರಕರಣ ಕೊಂಚ ಭಿನ್ನ. ಅಮೆರಿಕದ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸದಿದ್ದರೂ 1 ಲಕ್ಷ ರು. ದಂಡ ತೆತ್ತಿದ್ದಾನೆ.

ವಾಷಿಂಗ್ಟನ್ : ಕುಡಿದು ವಾಹನ ಚಾಲನೆ ಮಾಡುವುದು ಅಪಾಯಕ್ಕೆ ಆಹ್ವಾನ ಎಂಬ ಎಚ್ಚರಿಕೆ ಸಂದೇಶವನ್ನು ಕೇಳುತ್ತಲೇ ಇರುತ್ತೇವೆ. ಆದರೆ, ಈ ಪ್ರಕರಣ ಕೊಂಚ ಭಿನ್ನ. ಅಮೆರಿಕದ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸದಿದ್ದರೂ 1 ಲಕ್ಷ ರು. ದಂಡ ತೆತ್ತಿದ್ದಾನೆ.

ಆಗಿದ್ದೇನೆಂದರೆ, ಪಶ್ಚಿಮ ವರ್ಜಿನಿಯಾದ ಕೆನೆ ಬ್ಯಾಚ್‌ಮೆನ್‌ ಎಂಬಾತ ತನ್ನ ಸ್ನೇಹಿತನ ಪಾರ್ಟಿಗೆ ಹೋಗಿ ಕಂಠಪೂರ್ತಿ ಕುಡಿದಿದ್ದ. ಮನೆಗೆ ಹೋಗಲು ಉಬರ್‌ ಕ್ಯಾಬ್‌ ಬುಕ್‌ ಮಾಡಿದ್ದ. ಆದರೆ, ತಾನು ತೆರಳಬೇಕಾದ ಜಾಗದ ಬದಲಾಗಿ 482 ಕಿ.ಮೀ. ದೂರದ ಸ್ಥಳವೊಂದನ್ನು ಆಯ್ಕೆ ಮಾಡಿ ನಿಶ್ಚಿಂತೆಯಿಂದ ನಿದ್ರಿಸಿದ್ದಾನೆ.

ಆದರೆ, ಕಾರು ಇಳಿದ ಬಳಿಕ 1.06 ಲಕ್ಷ ರು. ಬಿಲ್‌ ಬಂದಿದ್ದು, ತಾನು ಮಾಡಿದ ಎಡವಟ್ಟಿಗೆ ಬೆಚ್ಚಿಬಿದ್ದಿದ್ದಾನೆ.

loader