2009ರಿಂದ 2013ರವರೆಗೆ ವಾರದಲ್ಲಿ ಎರಡರಿಂದ ಮೂರು ಬಾರಿ ರಕ್ಕಸ ತಂದೆ ತನ್ನ ಮಗಳನ್ನು ರೇಪ್ ಮಾಡಿದ್ದು ನ್ಯಾಯಾಲಯದಲ್ಲಿ ಕಳೆದ ತಿಂಗಳು ಸಾಬೀತಾಗಿತ್ತು.

ಅಮೆರಿಕ(ಅ. 23): ಸ್ವಂತ ಮಗಳ ಮೇಲೆ ರೇಪ್ ಮಾಡಿದ 41 ವರ್ಷದ ವ್ಯಕ್ತಿಗೆ ಬರೋಬ್ಬರಿ 1,503 ವರ್ಷಗಳ ಕಾರಾಗೃಹ ಶಿಕ್ಷೆ ಸಿಕ್ಕಿದೆ. ಕ್ಯಾಲಿಫೋರ್ನಿಯಾ ರಾಜ್ಯದ ಫ್ರೆಸ್ನೋ ಕೌಂಟಿಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಹದಿಹರೆಯದ ವಯಸ್ಸಿನ ಮಗಳ ಮೇಲೆ ನಾಲ್ಕು ವರ್ಷಗಳ ಕಾಲ ಈ ವ್ಯಕ್ತಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆಂಬ ಆರೋಪವಿದೆ. 2009ರಿಂದ 2013ರವರೆಗೆ ವಾರದಲ್ಲಿ ಎರಡರಿಂದ ಮೂರು ಬಾರಿ ರಕ್ಕಸ ತಂದೆ ತನ್ನ ಮಗಳನ್ನು ರೇಪ್ ಮಾಡಿದ್ದು ನ್ಯಾಯಾಲಯದಲ್ಲಿ ಕಳೆದ ತಿಂಗಳು ಸಾಬೀತಾಗಿತ್ತು. ಆದರೆ, ಈ ಅಪರಾಧಕ್ಕೆ ಇಷ್ಟು ಪ್ರಮಾಣದ ಸೆರೆಮನೆವಾಸದ ಶಿಕ್ಷೆ ಹೇಗೆ ಬಂದಿತು ಎಂದು ಅಚ್ಚರಿ ಆಗದೇ ಇರದು. ಆದರೆ, ಮಗಳ ಮೇಲೆ ಅತ್ಯಾಚಾರ ಎಸಗಿದ ಕಿಂಚಿತ್ತೂ ಪಾಪಪ್ರಜ್ಞೆ ಈ ಕೀಚಕನಿಗೆ ಇರಲಿಲ್ಲ. ಇದು ನ್ಯಾಯಾಧೀಶರನ್ನು ಕೆರಳಿಸಿತೆನ್ನಲಾಗಿದೆ. ಹೀಗಾಗಿ, ನಿನ್ನೆ ನ್ಯಾ| ಎಡ್ವರ್ಡ್ ಸಾರ್ಕಿಸಿಯನ್ ಜೂನಿಯರ್ ಅವರು ಅಪರಾಧಿ ಲೋಪೆಜ್'ಗೆ 1,503 ವರ್ಷ ಕಾರಾಗೃಹ ವಾಸದ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.