ಮಾಜಿ ಸಿಎಂ ಮನೆಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಯೋರ್ವನನ್ನು ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ. ಮಾಜಿ ಸಿಎಂ ಫಾರೂಕ್ ಅಬ್ದಲ್ಲಾ ನಿವಾಸಕ್ಕೆ ತೆರಳಲು ಯತ್ನಿಸಿದವನು ಇದೀಗ ಗುಂಡೇಟಿಗೆ ಬಲಿಯಾಗಿದ್ದಾನೆ.

ಕಾಶ್ಮೀರ : ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ನಿವಾಸಕ್ಕೆ ಅಕ್ರಮವಾಗಿ ನುಸುಳಲು ಯತ್ನಿಸಿದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ್ದಾರೆ. ಶನಿವಾರ ಬೆಳಗ್ಗೆ 9.30ರ ಸುಮಾರಿಗೆ ಬಟಿಂಡಾ ಪ್ರದೇಶದಲ್ಲಿ ಫಾರೂಕ್ ಅಬ್ದುಲ್ಲಾ ಅವರ ಮನೆಯ ಗೇಟ್ ನಲ್ಲಿ ತನ್ನ ಎಸ್ ಯುವಿಯನ್ನು ಚಲಾಯಿಸಿಕೊಂಡು ಬಂದಿದ್ದಾನೆ.

ಈ ವೇಳೆ ಆತನನ್ನು ತಡೆದರೂ ಕೂಡ ಮನೆಯ ಗೇಟ್ ಒಳಗೆ ತೆರಳಿದ್ದು, ಈ ವೇಳೆ ಭದ್ರತಾ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆದಿದೆ. ಇದಾದ ಬಳಿಕ ಅಕ್ರಮವಾಗಿ ಆತ ಮನೆಯ ಗೇಟ್ ನುಸಳಿ ತೆರಳಿದ್ದರಿಂದ ಭದ್ರತಾ ಸಿಬ್ಬಂದಿ ಆತನನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. 

ಈ ವೇಳೆ ಫಾರೂಕ್ ಅಬ್ದುಲ್ಲಾ ಅವರು ನಿವಾಸದಲ್ಲಿ ಇರಲಿಲ್ಲ ಎನ್ನಲಾಗಿದೆ. ಈತನನ್ನು ಮುರ್ಫಾಸ್ ಶಾ ಎಂದು ಗುರತಿಸಲಾಗಿದ್ದು, ವಿಐಪಿ ಗೇಟ್ ಮೂಲಕ ಆತ ಮನೆ ಪ್ರವೇಶಿಲು ಯತ್ನಿಸಿದ್ದನೆನ್ನಲಾಗಿದೆ. 

ಅಕ್ರಮವಾಗಿ ಮನೆ ಪ್ರವೇಶಿಸುವ ವೇಳೆ ಆತನ ಬಳಿ ಯಾವುದೇ ರೀತಿಯ ಆಯುಧಗಳು ಇರಲಿಲ್ಲ. ಈ ಪ್ರಕರಣ ಸಂಬಂಧ ಸದ್ಯ ತನಿಖೆ ಕೈಗೊಳ್ಳಲಾಗಿದೆ ಎಂದು ಜಮ್ವಾಲ್ ಐಜಿಪಿ ಎಸ್ ಡಿ ಸಿಂಗ್ ಹೇಳಿದ್ದಾರೆ.