ರಾಂಚಿ[ಜೂ. 07]  ಸರಕಾರ ರೇಶನ್ ನೀಡಲು ಮಾಡಿಕೊಂಡ ವ್ಯವಸ್ಥೆಯ ಲೋಪ ವ್ಯಕ್ತಿಯ ಜೀವವನ್ನೆ ಬಲಿ ಪಡೆದುಕೊಂಡಿದೆ. ಜಾರ್ಖಂಡ್ ರಾಜ್ಯದ ಲಥಾರ್ ಜಿಲ್ಲೆಯ 65 ವರ್ಷದ ರಾಮ್ ಚರಣ ಮುಂಡಾ ಆಹಾರ ದೊರೆಯದೆ ಅಪೌಷ್ಟಿಕತೆಯಿಂದ  ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಿಕೊಳ್ಳಲು ಸರಕಾರ ಮುಂದಾಗಿದ್ದರಿಂದ ಕಳೆದ ಮೂರು ತಿಂಗಳಿನಿಂದ ರೇಶನ್ ವ್ಯವಸ್ಥೆಯಲ್ಲಿ ವಿಳಂಬವಾಗಿತ್ತು.  ನೆಟ್ ವರ್ಕ್ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಸಾವಿಗೀಡಾದ ವ್ಯಕ್ತಿಯ ಕುಟುಂಬಕ್ಕೆ ರೇಶನ್ ತಲುಪಿರಲಿಲ್ಲ. 

ಆದರೆ ಜಿಲ್ಲಾಡಳಿತ ಈ ಆರೋಪವನ್ನು ಅಲ್ಲಗಳೆದಿದೆ. ಅತಿಯಾದ ಮದ್ಯಸೇವನೆ ಚಟ ಅಂಟಿಸಿಕೊಂಡಿದ್ದರಿಂದ ಮುಂಡಾ ಸಾವಿಗೀಡಾಗಿದ್ದಾರೆ.  ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಎರಡು ದಿನಗಳ ಹಿಂದಷ್ಟೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು ಎಂದಿದೆ.

ಮುಂಡಾ ಮನೆಯಲ್ಲಿ ಕಳೆದ ಮೂರು ದಿನಗಳಿಂದ ಅಡುಗೆ ಮಾಡಿರಲಿಲ್ಲ ಎಂದು ಅಕ್ಕ-ಪಕ್ಕದ ಮನೆಯವರು ಹೇಳಿದ್ದಾರೆ.ನದಿನಗೂಲಿಯಾಗಿ ಕೆಲಸ ಮಾಡುತ್ತಿದ್ದ ಮುಂಡಾ ಉದ್ಯೋಗ ಖಾತ್ರಿ ಕೆಲಸಕ್ಕೂ ಹೋಗುತ್ತಿದ್ದರು.