ಬನ್ನೇರುಘಟ್ಟದಲ್ಲಿ ಹುಲಿಗಳ ದಾಳಿಗೆ ಸಿಬ್ಬಂದಿ ಬಲಿ

ಬೆಂಗಳೂರಿನ ಬನ್ನೇರುಘಟ್ಟ ಸಫಾರಿಯಲ್ಲಿ ಸಿಬ್ಬಂದಿಯನ್ನೇ ಎರಡು ಹುಲಿ ಮರಿಗಳು ಕಚ್ಚಿ ಸಾಯಿಸಿವೆ. 42 ವರ್ಷದ ಆಂಜನೇಯ ಬಲಿಯಾದ ದುರ್ದೈವಿ. ಪ್ರಾಣಿ ಪಾಲಕ ಆಂಜನೇಯ ಸಂಜೆ ಹುಲಿಗಳಿಗೆ ಆಹಾರ ನೀಡಿ, ಪಕ್ಕದ ಬೋನನ್ನು ಸ್ವಚ್ಛಗೊಳಿಸುತ್ತಿದ್ದಾಗ ಹುಲಿ ಮರಿಗಳು ದಾಳಿ ನಡೆಸಿ, ಹತ್ಯೆಗೈದಿವೆ. ಬೆಂಗಳೂರಿನ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿ ಆಂಜನೇಯ ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಪಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ದಾಳಿ ನಡೆಸಿದ ಹುಲಿಗಳು ಒಂದೂವರೆ ವರ್ಷದವುಗಳಾಗಿದೆ.

(ಸಂಗ್ರಹ ಚಿತ್ರ)