ಶಾಸಕ ಚಲುವರಾಯಸ್ವಾಮಿ ಬೆಂಗಾವಲು ವಾಹನ ಡಿಕ್ಕಿ: ಬೈಕ್ ಸವಾರ ಗಂಭೀರ ಗಾಯ

First Published 30, Jan 2018, 9:21 PM IST
Man Death after MLA Escort vehicle Dash
Highlights

ಶಾಸಕರು ಕಾರು ನಿಲ್ಲಿಸದೆ ತೆರಳಿದ್ದಾರೆ. ಶಾಸಕರ ವಿರುದ್ಧ ರಸ್ತೆ ಮದ್ಯೆ ಬೆಂಕಿ‌ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಮಂಡ್ಯ(ಜ.30):  ನಾಗಮಂಗಲ ಶಾಸಕ ಚಲುವರಾಯಸ್ವಾಮಿ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.

ಕೆ‌.ಆರ್.ಪೇಟೆ ಯ ಮನೆ ಮನೆ ಕಾಂಗ್ರೆಸ್ ಸಭೆ ಮುಗಿಸಿ ಮಂಡ್ಯಕ್ಕೆ ಹೋಗುತ್ತಿದ್ದ ವೇಳೆ ಮುರುಕನಹಳ್ಳಿ ಬಳಿ ಬೆಂಗಾವಲು ವಾಹನ ಬೈಕ್'ಗೆ ಡಿಕ್ಕಿ ಹೊಡೆದಿದೆ. ಶಾಸಕರು ಕಾರು ನಿಲ್ಲಿಸದೆ ತೆರಳಿದ್ದಾರೆ. ಶಾಸಕರ ವಿರುದ್ಧ ರಸ್ತೆ ಮದ್ಯೆ ಬೆಂಕಿ‌ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಉದ್ರಿಕ್ತ ಗ್ರಾಮಸ್ಥರನ್ನು ಚದುರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆಸಲಾಗಿದೆ. ಸ್ಥಳದಲ್ಲಿ  ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕೆ.ಆರ್.ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

loader