ಈಜಲು ಬರುತ್ತಿದ್ದ ಮಧನ್ ತನ್ನ 8 ಮಂದಿ ಸ್ನೇಹಿತರನ್ನು ರಕ್ಷಿಸಿದ ಬಳಿಕ ಕೆಸರಿನಲ್ಲಿ ಸಿಲುಕಿ ಅಸುನೀಗಿದ್ದಾನೆ

ಸೇಲಂ(ಆ.01): ಎಂಟು ಜನರ ಪ್ರಾಣವನ್ನು ರಕ್ಷಿಸಿದ ಬಳಿಕ ಮದನ್ (21) ಎಂಬಾತ ತಾನೇ ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಮೆಟ್ಟೂರಿನ ಸಮೀಪ ಸೋಮವಾರ ನಡೆದಿದೆ. ಮಧನ್ ಮತ್ತು ಸ್ನೇಹಿತರು ತಮ್ಮ ಸಂಬಂಧಿ ಕೆ. ತಮಿಳರಸುವಿನ 19ನೇ ಜನ್ಮದಿನ ಆಚರಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಮದ್ಯ ಸೇವನೆ ಮಾಡಿ, ತೆಪ್ಪದಲ್ಲಿ ವಿಹಾರಕ್ಕೆ ತೆರಳಿದ್ದ ವೇಳೆ ತೆಪ್ಪ ಮಗುಚಿ ನೀರಿನಲ್ಲಿ ಮುಳುಗಿದ್ದರು. ಈಜಲು ಬರುತ್ತಿದ್ದ ಮಧನ್ ತನ್ನ 8 ಮಂದಿ ಸ್ನೇಹಿತರನ್ನು ರಕ್ಷಿಸಿದ ಬಳಿಕ ಕೆಸರಿನಲ್ಲಿ ಸಿಲುಕಿ ಅಸುನೀಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

(ಸಾಂದರ್ಭಿಕ ಚಿತ್ರ)