ಮನೆಗೆ ಹೋಗುತ್ತಿದ್ದಾಗ ಕರುಣಾಕರ್ ರೆಡ್ಡಿ ಮತ್ತು ವಿಶ್ವನಾಥ್ ರೆಡ್ಡಿ ತಮ್ಮನ್ನು ಜಾತಿಯಿಂದ ನಿಂದಿಸಿದ್ದಾರೆ ಎಂದು ನಾಗಪ್ಪ ದೂರು ನೀಡಿದ್ದಾರೆ.

ಬಳ್ಳಾರಿ(ಫೆ.19): ಮಾಜಿ ಸಚಿವ ಕರುಣಾಕರ್ ರೆಡ್ಡಿ ಮತ್ತು ವಿಶ್ವನಾಥ್ ರೆಡ್ಡಿ ಅವರ ಮೇಲೆ ಶ್ರೀರಾಮುಲು ಆಪ್ತ ನಾಗಪ್ಪ ಎಂಬುವವರು ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ಮನೆಗೆ ಹೋಗುತ್ತಿದ್ದಾಗ ಕರುಣಾಕರ್ ರೆಡ್ಡಿ ಮತ್ತು ವಿಶ್ವನಾಥ್ ರೆಡ್ಡಿ ತಮ್ಮನ್ನು ಜಾತಿಯಿಂದ ನಿಂದಿಸಿದ್ದಾರೆ ಎಂದು ನಾಗಪ್ಪ ದೂರು ನೀಡಿದ್ದಾರೆ. ಇಬ್ಬರ ವಿರುದ್ಧ ಬಳ್ಳಾರಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಸ್ತಿ ವಿಚಾರದಲ್ಲಿ ಗೊಂದಲದ ಕಾರಣ ಮಾಜಿ ಸಚಿವ ಕರುಣಾಕರ್ ರೆಡ್ಡಿ ಅವರು ಸಂಸದ ಶ್ರೀರಾಮುಲು ಸೇರಿ ಮೂವರ ಮೇಲೆ ಬಳ್ಳಾರಿಯ ಸ್ಥಳೀಯ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ ಬೆನ್ನೆಲ್ಲೆ ಈ ದೂರು ನೀಡಲಾಗಿದೆ.