ಮನುಷ್ಯ ಕಚ್ಚಿ ಶ್ವಾನಕ್ಕೆ ಗಾಯ : ಚಿಕಿತ್ಸೆ

Man Bites Dog in United States arrested
Highlights

ನಾಯಿ ಮನುಷ್ಯನಿಗೆ ಕಚ್ಚಿದರೆ ಸುದ್ದಿಯೇ ಅಲ್ಲ. ಅದೇ ಮನುಷ್ಯನೇ ನಾಯಿಗೆ ಕಚ್ಚಿದರೆ ದೊಡ್ಡ ಸುದ್ದಿಯಾಗುತ್ತದೆ. ಅಮೆರಿಕದಲ್ಲಿ ಇದೇ ವಿಷಯಕ್ಕೆ ವ್ಯಕ್ತಿಯೊಬ್ಬ ಸುದ್ದಿಯಾಗಿದ್ದಾನೆ.

ನ್ಯೂಯಾರ್ಕ್ : ನಾಯಿ ಮನುಷ್ಯನಿಗೆ ಕಚ್ಚಿದರೆ ಸುದ್ದಿಯೇ ಅಲ್ಲ. ಅದೇ ಮನುಷ್ಯನೇ ನಾಯಿಗೆ ಕಚ್ಚಿದರೆ ದೊಡ್ಡ ಸುದ್ದಿಯಾಗುತ್ತದೆ. ಅಮೆರಿಕದಲ್ಲಿ ಇದೇ ವಿಷಯಕ್ಕೆ ವ್ಯಕ್ತಿಯೊಬ್ಬ ಸುದ್ದಿಯಾಗಿದ್ದಾನೆ.

ನ್ಯೂ ಹ್ಯಾಂಪ್‌ಶೈರ್ ನಲ್ಲಿ ಈ ಘಟನೆ ನಡೆದಿದ್ದು, ಬೊಸ್ಕಾವೆನ್ ಪಟ್ಟಣದಲ್ಲಿರುವ ಮನೆಯೊಂದರಿಂದ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪೊಲೀಸರು ಶೋಧ ಕಾರ್ಯಕ್ಕೆ ಇಳಿದಿದ್ದರು.

ಬಂಧನದಿಂದ ಪಾರಾಗಲು ಆತ ಬಟ್ಟೆಗಳ ರಾಶಿಯ ಮಧ್ಯೆ ಅಡಿಗಿಕೊಂಡಿದ್ದ. ಆತನ ಪತ್ತೆಗೆ ಪೊಲೀಸ್ ನಾಯಿಯನ್ನು ಬಿಡಲಾಗಿತ್ತು. ಆದರೆ, ನಾಯಿಯ ಮುಖವನ್ನು ಕಚ್ಚಿ ಗಾಯಗೊಳಿಸಿದ್ದ. ಕೊನೆಗೂ ಆತನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾಯಿಗೆ ಚಿಕಿತ್ಸೆ ನೀಡಲಾಗಿದೆ.

loader