ಸರಸಕ್ಕೆ ಬಾ ಎಂದು ಪೀಡಿಸುತ್ತಿದ್ದ ವ್ಯಕ್ತಿಗೆ ಮಹಿಳೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು(ಮಾ.07): ಸರಸಕ್ಕೆ ಬಾ ಎಂದು ಪೀಡಿಸುತ್ತಿದ್ದ ವ್ಯಕ್ತಿಗೆ ಮಹಿಳೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಪಾಲಿಕೆ ಕಚೇರಿಯಲ್ಲಿ ಚುನಾವಣಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಗಾಯತ್ರಿಗೆ ಯತಿರಾಜ ಎಂಬಾಕೆ ದಿನಾಲೂ ಕಾಟ ಕೊಡುತ್ತಿದ್ದ. ಕುಡಿದ ಮತ್ತಿನಲ್ಲಿ ಮೆಸೇಜ್ ಮಾಡಿ ಸರಸಕ್ಕೆ ಬಾ ಎಂದು ಹಿಂಸೆ ಕೊಡುತ್ತಿದ್ದ. ಆದರೆ, ಇದಕ್ಕೆ ಗಾಯತ್ರಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಯತಿರಾಜ್ ಪಾಲಿಕೆ ಕಚೇರಿಗೆ ಬಂದು ಕಾಟ ಕೊಡಲು ಪ್ರಾರಂಭಿಸಿದ.
ಇದರಿಂದ ಬೇಸತ್ತ ಗಾಯತ್ರಿ ಪಾಲಿಕೆ ಆವರಣದಲ್ಲೇ ಸಾರ್ವಜನಿಕರೆದುರೇ ಯತಿರಾಜನಿಗೆ ಧರ್ಮದೇಟು ನೀಡಿದ್ದಾಳೆ. ಜತೆಗೆ ಕಾಲಿನಲ್ಲಿದ್ದ ಚಪ್ಪಲಿ ಸೇವೆಯೂ ಮಾಡಿದ್ದಾಳೆ. ಇನ್ನು, ಪತಿ ನಿಧನರಾದ ಹಿನ್ನೆಲೆಯಲ್ಲಿ ಅನುಕಂಪ ಆಧಾರದ ಮೇಲೆ ಗಾಯತ್ರಿ ಕೆಲಸ ಪಡೆದಿದ್ರು. ಇದಕ್ಕೆ ಯತಿರಾಜ್ ಕೂಡ ನೆರವು ನೀಡಿದರು ಎನ್ನಲಾಗಿದೆ.
