ಚಿತ್ರದುರ್ಗ(ನ.15): ಮಹಾತ್ಮ ಗಾಂಧೀಜಿಗೆ ಮುಸ್ಲಿಮರ ಟೋಪಿ ಧರಿಸಿದ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದ ನಗರದ ಸ್ಟೇಡಿಯಂ ರಸ್ತೆಯ ವೀರೇಶ್ ಎಂಬಾತನನ್ನು ಬಂಸಲಾಗಿದೆ. ಗಾಂಧೀಜಿಯವರ ಚಿತ್ರಕ್ಕೆ ಮುಸ್ಲಿಮರ ಟೋಪಿ ಹಾಕಿದ್ದಲ್ಲದೆ ಪ್ರವಾದಿ ಮಹಮ್ಮದರ ಬಗ್ಗೆ ಅವಹೇಳನಕಾರಿಯಾಗಿ ಚಿತ್ರಿಸುವ ಕೆಲಸ ಮಾಡಿರುವ ವೀರೇಶ್ ವಿರುದ್ಧ ಜಮಾತೆ ಸಮಿತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ವೀರೇಶ್‌ನನ್ನು ಬಂಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಅರುಣ ರಂಗರಾಜನ್ ತಿಳಿಸಿದ್ದಾರೆ.