ವಾಟ್ಸಪ್ ಸ್ಟೇಟಸ್‌ನಲ್ಲಿ ಪ್ರಚೋದನಕಾರಿ ವೀಡಿಯೋ ಹಾಕಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಕೊಣಾಜೆ ಪೊಲೀಸರು ಸೈಬರ್ ಕ್ರೈಂ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿದ್ದಾರೆ.
ಉಳ್ಳಾಲ: ವಾಟ್ಸಪ್ ಸ್ಟೇಟಸ್ನಲ್ಲಿ ಪ್ರಚೋದನಕಾರಿ ವೀಡಿಯೋ ಹಾಕಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಕೊಣಾಜೆ ಪೊಲೀಸರು ಸೈಬರ್ ಕ್ರೈಂ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿದ್ದಾರೆ.
ಫಜೀರು ಅಡ್ಕ ನಿವಾಸಿ ಮೋಹನ್ ಆಚಾರ್ಯ (30) ಬಂಧಿತ. ಕೇರಳ ಭಾಗದಲ್ಲಿ ಅಪ್ರಾಪ್ತೆ ಬಾಲಕಿಗೆ ಅತ್ಯಾಚಾರ ಮಾಡಿದ ಆರೋಪಿಯನ್ನು ಥಳಿಸಿ ಕೊಂದ ವಿಡಿಯೋವನ್ನು ವಾಟ್ಸಪ್ ಸ್ಟೇಟಸ್ನಲ್ಲಿ ಹಾಕಿ, ಇನ್ನು ಮುಂದೆ ಫಜೀರು ಸಮೀಪ ದನ ಕಳವು ನಡೆಸಿದವರಿಗೆ ಇದೇ ರೀತಿ ಥಳಿಸಿ ಕೊಲ್ಲಬೇಕು’ ಅನ್ನುವ ಬೆದರಿಕೆಯೊಡ್ಡಿರುವ ಸಂದೇಶವನ್ನು ಹಾಕಿದ್ದ.
ಇದರ ವಿರುದ್ಧ ಪಜೀರು ನಿವಾಸಿ ಲ್ಯಾನ್ಸಿ ಡಿಸೋಜ ಅನ್ನುವವರು ದಾಖಲಿಸಿದ ದೂರಿನಂತೆ ವಿಚಾರಣೆ ನಡೆಸಿದ ಕೊಣಾಜೆ ಪೊಲೀಸರು ಆರೋಪಿ ವಿರುದ್ಧ ಸೈಬರ್ ಕ್ರೈಂ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
