ಮದುವೆ ಶಾಸ್ತ್ರಕ್ಕಾಗಿ ಕಿರಣ್ ಕಲ್ಯಾಣ ಮಂಟಪಕ್ಕೆ ಆಗಮಿಸಿದ. ಈ ವೇಳೆ ಸಿನಿಮೀಯ ಮಾದರಿಯಲ್ಲಿ  ಬಂದ ಪೊಲೀಸರು ಮದುಮಗನನ್ನು ಬಂದಿಸಿ ಕರೆದೊಯ್ದಿದರು

ಮಂಗಳೂರು(ಅ.17): ಹೊಸ ಬಾಳಿನ ಹೊಸ್ತಿಲಲ್ಲಿನ ಜೀವನಕ್ಕೆ ಆಣಿಯಾಗಿ ಮದುಮಗಳಿಗೆ ತಾಳಿಯನ್ನು ಕಟ್ಟಲು ಸಿದ್ದವಾಗಿದ್ದ ಮದುಮಗನಿಗೆ ಪೊಲೀಸರು ಬೇಡಿ ತೊಡಸಿದ್ದಾರೆ. ಮಂಗಳೂರು ಜಿಲ್ಲೆಯ ಮದುಮಗ ಸುಬ್ರಹ್ಮಣ್ಯ ಪಟ್ಟಣದ ನಿವಾಸಿ ಕಿರಣ್ ಎಂಬಾತನಿಗೆ ಗೋಣಿಬೀಡು ಸಮೀಪದ ಗ್ರಾಮವೊಂದರ ಹಳ್ಳಿಯ ಯುವತಿಯೊಂದಿಗೆ ಈತನ ವಿವಾಹ ನಿಗದಿಯಾಗಿತ್ತು.

ಸಂಬಂದಿಕರೊಂದಿಗೆ ಮದುವೆ ಶಾಸ್ತ್ರಕ್ಕಾಗಿ ಕಿರಣ್ ಕಲ್ಯಾಣ ಮಂಟಪಕ್ಕೆ ಆಗಮಿಸಿದ. ಈ ವೇಳೆ ಸಿನಿಮೀಯ ಮಾದರಿಯಲ್ಲಿ ಬಂದ ಪೊಲೀಸರು ಮದುಮಗನನ್ನು ಬಂದಿಸಿ ಕರೆದೊಯ್ದಿರುವ ಘಟನೆ ಮೂಡಿಗೆರೆ ತಾಲೂಕಿನ ಜನ್ನಾಪುರದ ವರ್ತಕರ ಸಮೂದಾಯ ಭವನದಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ವಾಸಿಸುತಿದ್ದ ಮದುಮಗ ಕಿರಣ ತನಗೆ ಬಾಡಿಗೆ ಮನೆ ನೀಡಿದ್ದ ಒಬ್ಬಂಟಿ ವೃದ್ಧೆ ಮಹಿಳೆಯನ್ನು ಆಗಷ್ಟ 13ರಂದು ಕೊಲೆ ಮಾಡಿರುವ ಆಪಾದನೆಯ ಮೇರೆಗೆ, ರಾಮನಗರದ ಪೊಲೀಸರು ಬಂಧಿಸಿದ್ದಾರೆ.