ಚಿತ್ತೂರು(ಆಂದ್ರಪ್ರದೇಶ):  ಹೆಂಡತಿಯೊಂದಿಗೆ ಜಗಳವಾಡಿದ ಪಾಪಿ ತಂದೆಯೊಬ್ಬ ತನ್ನ ಮೂವರು ಮಕ್ಕಳನ್ನು ನದಿಗೆ ಎಸೆದು ಕೊಂದ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಬಾಲಗಂಗನಪಲ್ಲಿ ಗ್ರಾಮದಲ್ಲಿ ನಡೆದಿದೆ.

ಪುನಿತ್(6), ಸಂಜಯ್ (3), ರಾಹುಲ್ (10) ಮೃತ ದುರ್ದೈವಿಗಳು. ವೆಂಕಟೇಶ್ ಮಕ್ಕಳನ್ನು ಕೊಂದ ಕ್ರೂರಿ. ನಿನ್ನೆ ರಾತ್ರಿ 2ನೇ ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದ. ಗಲಾಟೆ ನಂತರ ಮೂವರು ಕಂದಮ್ಮಗಳನ್ನು ಹತ್ತಿರದ ನೀವಾ ನದಿಗೆ ಎಸೆದು ಪರಾರಿಯಾಗಿದ್ದಾನೆ.ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಗಂಗಾಧರ ನೆಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಚಿತ್ತೂರು ಜಿಲ್ಲಾ ಎಸ್ ಪಿ ಭೇಟಿ ನೀಡಿ ಅಗ್ನಿಶಾಮಕ ಸಿಬ್ಬಂದಿಯ ನೆರವಿನಿಂದ ನದಿಯಲ್ಲಿನ ಮೂವರು ಮಕ್ಕಳ ಮೃತ ದೆಹಗಳು ಹೊರಕ್ಕೆ ತೆಗೆಯಲಾಗಿದೆ. 

(ಸಾಂದರ್ಭಿಕ ಚಿತ್ರ)