ಮಾದಕ ಪದಾರ್ಥ ಜಾರಿ ಕಾರ್ಯಾಲಯ ಅಧಿಕಾರಿಗಳು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ್ದಾರೆ.

ಅಂತರರಾಷ್ಟ್ರೀಯ ಡ್ರಗ್ ಮಾಫಿಯಾ ಜಾಲದ ಪ್ರಕರಣಗಳಿಗೆ ಸಂಬಂಧಿಸಿದಂತೆ ಖ್ಯಾತ ಬಾಲಿವುಡ್ ನಟಿ ಮಮತಾ ಕುಲಕರ್ಣಿ ಅವರ ಪತಿ ವಿಕ್ಕಿ ಗೋಸ್ವಾಮಿಯನ್ನು ಕೀನ್ಯಾದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಮಾದಕ ಪದಾರ್ಥ ಜಾರಿ ಕಾರ್ಯಾಲಯ ಅಧಿಕಾರಿಗಳು ಬಂಧಿಸಿ ಅಮೆರಿಕಾಕ್ಕೆ ಕರೆದೋಯ್ದಿದ್ದಾರೆ.

ಗೋಸ್ವಾಮಿ ಜೊತೆ ಪಾಕ್ ನಾಗರಿಕನನ್ನು ಒಳಗೊಂಡು ಮೂವರನ್ನು ಬಂಧಿಸಲಾಗಿದೆ. ಗೋಸ್ವಾಮಿ ವಿರುದ್ಧ ಭಾರತದಲ್ಲೂ ಡ್ರಗ್ ಜಾಲಕ್ಕೆ ಅನೇಕ ಪ್ರಕರಣಗಳಿವೆ. ಮಾದಕ ಪದಾರ್ಥ ಜಾರಿ ಕಾರ್ಯಾಲಯ ಅಧಿಕಾರಿಗಳು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ್ದಾರೆ. ಥಾಣೆ ಪೊಲೀಸರು ಅಮೆರಿಕಾದ ಮಾದಕ ಪದಾರ್ಥ ಜಾರಿ ಕಾರ್ಯಾಲಯದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಶೀಘ್ರದಲ್ಲಿಯೇ ಬಂಧಿಸುವುದಾಗಿ ತಿಳಿಸಿದ್ದಾರೆ.

ಮಮತಾ ಕುಲಕರ್ಣಿ ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿದ್ದು, ಕನ್ನಡದ ವಿಷ್ಣು ವಿಜಯ ಸಿನಿಮಾದಲ್ಲೂ ಅಭಿನಯಿಸಿದ್ದಾಳೆ.