ಸಾವಿರಾರು ಕೋಟಿ ಸಾಲ ಮಾಡಿ ದೇಶವನ್ನು ಬಿಟ್ಟು ಪರಾರಿಯಾಗಿರುವ  ವಿಜಯ್ ಮಲ್ಯ ಲಂಡನ್ ಮನೆಯಲ್ಲಿ ಚಿನ್ನದ ಟಾಯ್ಲೆಟ್ ಕಮೋಡ್ ಇರುವುದು ಇದೀಗ ಬೆಳಕಿಗೆ ಬಂದಿದೆ.

ಮುಂಬೈ: ಉದ್ಯಮಿ ವಿಜಯ್‌ ಮಲ್ಯ ಭಾರತದ ಬ್ಯಾಂಕ್‌ಗಳಲ್ಲಿ 9 ಸಾವಿರ ಕೋಟಿ ರು. ಸಾಲ ಮಾಡಿ ಲಂಡನ್‌ಗೆ ಪರಾರಿಯಾಗಿದ್ದಾರೆ.

ಆದರೆ ಲಂಡನ್‌ನಲ್ಲಿರುವ ಅವರ ವೈಭವೋಪೇತ ಮನೆಯಲ್ಲಿ ಚಿನ್ನದ ಟಾಯ್ಲೆಟ್‌ ಕಮೋಡ್‌ ಇಟ್ಕೊಂಟು ಮಜಾ ಮಾಡುತ್ತಿದ್ದಾರೆ ಎಂಬ ಕುತೂಹಲಕರ ವಿಷಯ ಬೆಳಕಿಗೆ ಬಂದಿದೆ.

ಆಂಗ್ಲ ಲೇಖಕ ಜೇಜ್‌ ಕ್ರ್ಯಾಬ್‌ಟ್ರೀ ಎಂಬುವರು ಮುಂಬೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಈ ಅಚ್ಚರಿಯ ವಿಚಾರ ತಿಳಿಸಿದ್ದಾರೆ. ‘ಒಮ್ಮೆ ನಾನು ಲಂಡನ್‌ನ ಮಲ್ಯರ ಮನೆಗೆ ಹೋಗಿದ್ದೆ. ಆಗ ಚಿನ್ನದ ಟಾಯ್ಲೆಟ್‌ ನೋಡುವ ಸುಸಂದರ್ಭ ಒದಗಿ ಬಂದಿತ್ತು’ ಎಂದು ಅವರು ತಿಳಿಸಿದ್ದಾರೆ.