ಕಲಬುರಗಿ :  ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ನಾನಕ್ಕಾಗಿ ಬಾತ್‌ ರೂಮಿಗೆ ತೆರಳಿದ್ದಾಗ ಕಾಲು ಜಾರಿ ಬಿದ್ದು ಗಾಯಗೊಂಡ ಘಟನೆ ಭಾನುವಾರ ನಡೆದಿದೆ.

ನಗರದ ಐವಾನ್‌ ಶಾಹಿಯಲ್ಲಿರುವ ಸ್ವಗೃಹ ‘ಲುಂಬಿನಿ’ಯಲ್ಲಿ ಖರ್ಗೆ ಕಾಲು ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಈ ವೇಳೆ ತಕ್ಷಣ ಅವರು ಚೀರಿಕೊಂಡಿದ್ದು, ಸಹಾಯಕ್ಕೆ ಓಡಿಬಂದ ಗನ್‌ಮ್ಯಾನ್‌ ಮತ್ತು ಆಪ್ತ ಸಹಾಯಕರು ಎಬ್ಬಿಸಿದ್ದಾರೆ. 

ಘಟನೆಯಲ್ಲಿ ಖರ್ಗೆ ಅವರ ಸೊಂಟಕ್ಕೆ ಮತ್ತು ಬಲಗಾಲಿನ ಹೆಬ್ಬೆರಳಿಗೆ ಗಾಯಗಳಾಗಿವೆ. ವೈದ್ಯರನ್ನು ಮನೆಗೆ ಕರೆಸಿ ಪ್ರಾಥಮಿಕ ಚಿಕಿತ್ಸೆ ಕೊಡಲಾಗಿದೆ.

ಹೆಚ್ಚಿನ ಗಾಯಗಳೇನೂ ಆಗಿಲ್ಲ ಎಂದು ನಂತರ ಖರ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಗನ್‌ ಮ್ಯಾನ್‌ ಆಸರೆಯೊಂದಿಗೆ ಖರ್ಗೆ ನಡೆದಾಡುತ್ತಿದ್ದಾರೆ.