ಯುವಕರನ್ನು ಕುಡಿತದಿಂದ ದೂರವಿಡಲು ಎನ್'ಜಿಓ ಸಲಹೆ ಕುಡಿತದ ಚಟಕ್ಕೆ ಬೀಳುವವರಲ್ಲಿ 18-25ವರ್ಷದೊಳಗಿನವರೇ ಹೆಚ್ಚು

ನವದೆಹಲಿ: ದಿನ ಕಳೆದಂತೆ ಎಲ್ಲಾ ಸೇವೆಗಳಿಗೂ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಮಾಡಲಾಗುತ್ತಿದೆ. ಈಗ, ಯುವಕರನ್ನು ಕುಡಿತದಿಂದ ದೂರವಿಡಲು ಎನ್'ಜಿಓವೊಂದು ಸಲಹೆ ನೀಡಿದೆ.

ಯುವಕರನ್ನು ಕುಡಿತದ ಚಟದಿಂದ ತಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸುವಂತೆ CADD ಎಂಬ ಎನ್​​ಜಿಓ ಸಲಹೆ ನೀಡಿದೆ.

ಕುಡಿತದ ಚಟಕ್ಕೆ ಬೀಳುವವರಲ್ಲಿ 18-25ವರ್ಷದೊಳಗಿನವರೇ ಹೆಚ್ಚು, ಯುವಕರು ಕುಡಿದು ಅಪಘಾತಕ್ಕೆ ಒಳಗಾಗುತ್ತಿದ್ದಾರೆ, ಹೀಗಾಗಿ ಯುವಕರನ್ನು ಕುಡಿತದಿಂದ ತಡೆಯಲು 'ಆಧಾರ್' ಬಳಸಬಹುದು ಸಂಸ್ಥೆಯು ದೆಹಲಿ ಪೊಲೀಸರಿಗೆ ಶಿಫಾರಸು ಮಾಡಿದೆ.

ದೆಹಲಿಯಲ್ಲಿ 25 ವರ್ಷದೊಳಗಿನವರಿಗೆ ಮದ್ಯ ಮಾರಾಟ ಮಾಡುವುದು ನಿಷಿದ್ಧವಾಗಿದೆ.