ಉತ್ತರಪ್ರದೇಶದ ಪುಖರಾಯಾ ಬಳಿ ಇಂದು ಇಂಧೂರ್-ಪಾಟ್ನಾ ನಡುವೆ ಭೀಕರ ರೈಲು ಅಪಘಾತ ಸಂಭವಿಸಿ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಕಳೆದ 30 ವರ್ಷದಲ್ಲಿ ಭಾರತದಲ್ಲಿ ಸಂಭವಿಸಿದ ಪ್ರಮುಖ ರೈಲು ದುರಂತಗಳ ಪಟ್ಟಿ ಇಲ್ಲಿದೆ.
1) ಮೇ 28,2010:
ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯಲ್ಲಿ ಜ್ಞಾನೇಶ್ವರಿ ಎಕ್ಸ್'ಪ್ರೆಸ್ ರೈಲನ್ನು ನಕ್ಸಲರು ಹಳಿ ತಪ್ಪಿಸಿದ ಪರಿಣಾಮ 148ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.
2) ಸೆಪ್ಟೆಂಬರ್ 9, 2002:
ಬಿಹಾರದ ಔರಂಗಬಾದ್ ಜಿಲ್ಲೆಯಲ್ಲಿ ಹೌರಾ-ದೆಹಲಿ ರಾಜಧಾನಿ ಎಕ್ಸ್'ಪ್ರೆಸ್'ನ ಒಂದು ಬೋಗಿ ದಾವೆ ನದಿಗೆ ಬಿದ್ದ ಪರಿಣಾಮ 100ಕ್ಕೂ ಹೆಚ್ಚು ಮಂದಿ ಮೃತಪಟ್ಟು, 150 ಮಂದಿ ಗಾಯಗೊಂಡಿದ್ದರು.
3) ಆಗಸ್ಟ್ 2,1999:
ಅಸ್ಸಾಂನ ಗೈಸಲ್'ನಲ್ಲಿ 2 ರೈಲುಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ 290 ಮಂದಿ ಮೃತಪಟ್ಟಿದ್ದರು.
4) ನವೆಂಬರ್ 26,1998:
ಪಂಜಾಬಿನ ಖನ್ನಾ ಬಳಿ ಜಮ್ಮು ತೇವಿ-ಸೇಲ್ದಾ ಎಕ್ಸ್'ಪ್ರೆಸ್ ರೈಲು ಹಳಿ ತಪ್ಪಿ ಅಪಘಾತ ಸಂಭವಿಸಿದ ಕಾರಣ 212 ಮಂದಿ ಮೃತಪಟ್ಟಿದ್ದರು.
5) ಸೆಪ್ಟೆಂಬರ್ 14,1997:
ಮಧ್ಯಪ್ರದೇಶದ ಬಿಸ್ಲಾಪುರ್ ಜಿಲ್ಲೆಯಲ್ಲಿ ಅಹಮದಾಬಾದ್ -ಹೌರಾ ಎಕ್ಸ್'ಪ್ರೆಸ್ ರೈಲಿನ 5 ಭೋಗಿಗಳು ನದಿಗೆ ಬಿದ್ದು 81 ಮಂದಿ ಮೃತಪಟ್ಟಿದ್ದರು.
6) ಆಗಸ್ಟ್ 20 1995:
ಉತ್ತರ ಪ್ರದೇಶದ ಫಿರೋಜಾಬಾದ್ ರೈಲು ನಿಲ್ದಾಣದ ಬಳಿ ಪುರುಷೋತ್ತಮ್ ಎಕ್ಸ್'ಪ್ರೆಸ್ ಕಾಲಂದಿ ಎಕ್ಸ್'ಪ್ರೆಸ್'ಗೆ ಡಿಕ್ಕಿ ಹೊಡೆದ ಕಾರಣದಿಂದ 400ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು
7) ಏಪ್ರಿಲ್ 18,1988:
ಉತ್ತರ ಪ್ರದೇಶದ ಲಾಲ್ತಿಪುರ್ ಬಳಿ ಕರ್ನಾಟಕ ಎಕ್ಸ್'ಪ್ರೆಸ್ ಹಳಿ ತಪ್ಪಿದ ಪರಿಣಾಮ 75 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.
8) ಜುಲೈ 8,1988:
ಕೇರಳದ ಐಸ್'ಲ್ಯಾಂಡ್ ಎಕ್ಸ್'ಪ್ರೆಸ್ ಅಶ್ತಿಮುದಿ ಕೆರೆಗೆ ಉರಿಳಿದ ಪರಿಣಾಮ 107 ಮಂದಿ ಮೃತಪಟ್ಟಿದ್ದರು.
