Asianet Suvarna News Asianet Suvarna News

ದಳ,ಕಮಲಕ್ಕಿಲ್ಲ ಗೆಲುವು ಮತದಾರರು ನನ್ನ ಪರ ಒಲವು

ಚುನಾವಣೆಯಲ್ಲಿ ಮತದಾರರ ಪಾಲ್ಗೊಳ್ಳುವಿಕೆಯ ಚಿಂತನೆಗಳು ಬದಲಾಗಬೇಕು. ಸಮಾಜದಲ್ಲಿ ಪುನಃ ಈ ಹಿಂದಿನ ಸಮಾಜವಾದಿ ಚಿಂತನೆಗಳು ಮರುಕಳುಹಿಸಬೇಕೆಂಬುದು ನನ್ನ ಆಶಯ. ಪ್ರಸ್ತುತ ನಡೆಯುತ್ತಿರುವ ಲೋಕಸಭಾ
ಉಪಚುನಾವಣೆ ಅಗತ್ಯವಿರಲಿಲ್ಲ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. ಆದರೆ, ದೇಶದಲ್ಲಿ ಎಲ್ಲವೂ ಸಂವಿಧಾನದ ಬದ್ಧವಾಗಿಯೇ ನಡೆಯಬೇಕಿದೆ.ಈ ನಿಟ್ಟಿನಲ್ಲಿ ಉಪಚುನಾವಣೆ ನಡೆಯುತ್ತಿದ್ದು, ನಾನು ಇದೊಂದು ಸುವರ್ಣಾವಕಾಶ ಎಂದು ಭಾವಿಸಿ ಚುನಾವಣೆಗೆ ಸ್ಪರ್ಧಿಸಿದ್ದೇನೆ 

Mahima Patel of JDU to seek votes Shimoga By Poll
Author
Bengaluru, First Published Oct 30, 2018, 8:43 PM IST

ಭದ್ರಾವತಿ[ಅ.30]: ಸಮಾಜವಾದಿ ನೆಲೆಗಟ್ಟು ಹೊಂದಿರುವ ಶಿವಮೊಗ್ಗ ಜಿಲ್ಲೆಯ ಪ್ರಜ್ಞಾವಂತ ಮತದಾರರು ತಮ್ಮನ್ನು ಬೆಂಬಲಿಸುವ ವಿಶ್ವಾಸವಿದ್ದು, ಚುನಾವಣೆ ಫಲಿತಾಂಶವನ್ನು ಕೇವಲ ಗೆಲುವಿನ ದೃಷ್ಟಿಯಿಂದ ನೋಡದೆ ಬದಲಾವಣೆ ದೃಷ್ಟಿಯಲ್ಲಿ ನೋಡುತ್ತೇನೆ ಎಂದು ಜೆಡಿಯು ಅಭ್ಯರ್ಥಿ ಮಹಿಮಾ ಜೆ.ಪಟೇಲ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಮತದಾರರ ಪಾಲ್ಗೊಳ್ಳುವಿಕೆಯ ಚಿಂತನೆಗಳು ಬದಲಾಗಬೇಕು.ಸಮಾಜದಲ್ಲಿ ಪುನಃ ಈ ಹಿಂದಿನ ಸಮಾಜವಾದಿ ಚಿಂತನೆಗಳು ಮರುಕಳುಹಿಸಬೇಕೆಂಬುದು ನನ್ನ ಆಶಯ. ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಉಪಚುನಾವಣೆ ಅಗತ್ಯವಿರಲಿಲ್ಲ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. ಆದರೆ, ದೇಶದಲ್ಲಿ ಎಲ್ಲವೂ ಸಂವಿಧಾನದ ಬದ್ಧವಾಗಿಯೇ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಉಪಚುನಾವಣೆ ನಡೆಯುತ್ತಿದ್ದು, ನಾನು ಇದೊಂದು ಸುವರ್ಣಾವಕಾಶ ಎಂದು ಭಾವಿಸಿ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದರು.

ಪ್ರಸ್ತುತ ರಾಜಕಾರಣದಲ್ಲಿ ಅಪನಂಬಿಕೆ ಹೆಚ್ಚಾಗುತ್ತಿದ್ದು, ಜನರ ನಡುವೆ ವಿಶ್ವಾಸ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಸಮಾಜದಲ್ಲಿ ಸಂತೋಷ, ಸಮಾಧಾನ, ಸಂತೃಪ್ತಿ ಯಿಂದ ಕೂಡಿರುವ ವ್ಯಕ್ತಿ ಪ್ರಜ್ಞಾವಂತನಾಗಿದ್ದು, ಈತ ಪ್ರಜ್ಞಾವಂತಿಕೆ ಇಲ್ಲದ 10 ಲಕ್ಷ ಜನರಿಗಿಂತ ಹೆಚ್ಚು ಪವರ್‌ಫುಲ್. ಇಂತಹ ಮತದಾರರು ನನ್ನ ಸಮಾಜವಾದಿ ಚಿಂತನೆಗಳನ್ನು ಗುರುತಿಸುವ ವಿಶ್ವಾಸವಿದೆ. ನಮ್ಮ ತಂದೆ ಜೆ.ಎಚ್. ಪಟೇಲ್ ಅವರು ಸಮಾಜವಾದಿ ಚಿಂತನೆಗಳನ್ನು ಸಮಾಜ ದಲ್ಲಿ ಹುಟ್ಟುಹಾಕುವ ಮೂಲಕ ರಾಜ್ಯದಲ್ಲಿ ಸಂಯುಕ್ತ ಜನತಾದಳದ ಉದಯಕ್ಕೆ ಕಾರಣರಾದರು. ಅವರ ಆಶಯದಂತೆ ಇದೀಗ ಜೆಡಿಯುನಲ್ಲಿ ಉಳಿದುಕೊಂಡಿದ್ದೇನೆ. ಎಂದಿಗೂ ರಾಜ ಕಾರಣದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಕೊನೆಯವರೆಗೂ ರಾಜಕಾರಣದಲ್ಲಿಯೇ ಉಳಿಯುತ್ತೇನೆ. ಮುಂದಿನ ಚುನಾವಣೆಗಳಲ್ಲೂ ಸ್ಪರ್ಧಿಸುತ್ತೇನೆ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಾಕೃತಿಕ ಸಂಪತ್ತು ಹೇರಳವಾಗಿದ್ದು, ಐತಿಹಾಸಿಕ, ಪ್ರವಾಸಿ ತಾಣಗಳು ಹೆಚ್ಚಾಗಿವೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕಾಗಿದೆ. ನಿರುದ್ಯೋಗಿ ಯುವಕರು ಹೆಚ್ಚಾಗಿದ್ದು, ಉದ್ಯೋಗ ಕಲ್ಪಿಸಿಕೊಡಬೇಕಿದೆ. ಜಿಲ್ಲೆಯನ್ನು ಹಲವಾರು ರೀತಿ ಅಭಿವೃದ್ಧಿಗೊಳಿಸಬೇಕಾಗಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ನಾನು ನೀಡುವ ಎಲ್ಲ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.

ಶಿವರುದ್ರಯ್ಯಸ್ವಾಮಿ, ಸತೀಶ್, ಬೇಹಳ್ಳಿ ನಾಗರಾಜ್, ಪ್ರಶಾಂತ್, ಶಿವರಾಮ್‌ ಇದ್ದರು.
 

Follow Us:
Download App:
  • android
  • ios