ಮುಂಬೈ-ಪುಣೆ ನಡುವೆ ವಿಶ್ವದ ಮೊದಲ ಹೈಪರ್'ಲೂಪ್ ರೈಲು..?

First Published 19, Feb 2018, 9:10 AM IST
Maharashtra Virgin Group Sign Deal For World First Hyperloop Between Mumbai and Pune
Highlights

ಈ ರೈಲು ವ್ಯವಸ್ಥೆ ಸಾಧ್ಯವಾದರೆ, ಹಾಲಿ ಮುಂಬೈ ಮತ್ತು ಪುಣೆ ನಡುವೆ ಸಂಚಾರಕ್ಕೆ ಇರುವ ಅವಧಿ 3 ಗಂಟೆಯಿಂದ 20 ನಿಮಿಷಕ್ಕೆ ಇಳಿಯಲಿದೆ. ಈ ಯೋಜನೆಗೆ ಸದ್ಯ 3.5 ಲಕ್ಷ ಕೋಟಿ ರು.ವೆಚ್ಚವಾಗುವ ನಿರೀಕ್ಷೆ ಇದೆ. ಈ ರೈಲುಗಳು ಗಂಟೆಗೆ 1000 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರಲಿವೆ.

ಮುಂಬೈ(ಫೆ.19): ವಿಶ್ವದಲ್ಲೇ ಅತ್ಯಂತ ವೇಗವಾಗಿ ಚಲಿಸಬಲ್ಲ ರೈಲು ವ್ಯವಸ್ಥೆ ಎಂಬ ಹಿರಿಮೆಗೆ ಪಾತ್ರವಾಗುವ ಉದ್ದೇಶ ಹೊಂದಿರುವ ಹೈಪರ್‌ಲೂಪ್ ರೈಲು, ವಿಶ್ವದಲ್ಲೇ ಮೊದಲ ಸಂಚಾರವನ್ನು ಮುಂಬೈ ಮತ್ತು ಪುಣೆ ನಡುವೆ ನಡೆಸುವ ಸಾಧ್ಯತೆ ಇದೆ. ಇಂಥದ್ದೊಂದು ರೈಲು ಸಂಚಾರ ವ್ಯವಸ್ಥೆ ಆರಂಭಿಸುವ ಕುರಿತು ಸಾಧ್ಯಾಸಾಧ್ಯತೆ ಬಗ್ಗೆ ಮಹಾರಾಷ್ಟ್ರ ಸರ್ಕಾರ ಮತ್ತು ಹೈಪರ್‌'ಲೂಪ್‌'ನ ಮಾತೃಸಂಸ್ಥೆ ವರ್ಜಿನ್ ಗ್ರೂಪ್, ಭಾನುವಾರ ಒಪ್ಪಂದಕ್ಕೆ ಸಹಿ ಹಾಕಿವೆ.

ಇದರ ಮೊದಲ ಹಂತವಾಗಿ ಈ ಮಾರ್ಗದಲ್ಲಿ ಮಾದರಿ ಟ್ರ್ಯಾಕ್ ನಿರ್ಮಿಸಲಾಗುವುದು. ಈ ರೈಲು ವ್ಯವಸ್ಥೆ ಸಾಧ್ಯವಾದರೆ, ಹಾಲಿ ಮುಂಬೈ ಮತ್ತು ಪುಣೆ ನಡುವೆ ಸಂಚಾರಕ್ಕೆ ಇರುವ ಅವಧಿ 3 ಗಂಟೆಯಿಂದ 20 ನಿಮಿಷಕ್ಕೆ ಇಳಿಯಲಿದೆ. ಈ ಯೋಜನೆಗೆ ಸದ್ಯ 3.5 ಲಕ್ಷ ಕೋಟಿ ರು.ವೆಚ್ಚವಾಗುವ ನಿರೀಕ್ಷೆ ಇದೆ. ಈ ರೈಲುಗಳು ಗಂಟೆಗೆ 1000 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರಲಿವೆ.

ಮುಂಬೈನಲ್ಲಿ 2ನೇ ವಿಮಾನ ನಿಲ್ದಾಣಕ್ಕೆ ಶಂಕು ಸ್ಥಾಪನೆ:

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣದ ಕಾಮಗಾರಿಗೆ ಕೊನೆಗೂ ಶಂಕುಸ್ಥಾಪನೆ ನೆರವೇರಿದೆ. ಇಲ್ಲಿನ ನವಿ ಮುಂಬೈನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 16700 ಕೋಟಿ ರು. ಮೌಲ್ಯದ ಮೊದಲ ಹಂತದ ಕಾಮಗಾರಿಗೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ,ಶಂಕು ಸ್ಥಾಪನೆ

ನೆರವೇರಿಸಿದರು.

loader