ಕೋರ್ಟ್ ನಿಂದ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದೆ.  ಆರ್‌ಎಸ್‌ಎಸ್ ಪಥ ಸಂಚಲನದ ವೇಳೆ ಸಾರ್ವಜನಿಕ ಸ್ಥಳದಲ್ಲಿ ದಂಡ ಪ್ರಯೋಗಿಸುವ ಸಂಬಂಧ ತಮ್ಮ ಅಭಿಪ್ರಾಯ ತಿಳಿಸುವಂತೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. 

ನಾಗ್ಪುರ: ಆರ್‌ಎಸ್‌ಎಸ್ ಪಥ ಸಂಚಲನದ ವೇಳೆ ಸಾರ್ವಜನಿಕ ಸ್ಥಳದಲ್ಲಿ ದಂಡ ಪ್ರಯೋಗಿಸುವ ಸಂಬಂಧ ಆರೆಸ್ಸೆಸ್ ಮುಖ್ಯಸ್ಥ ಹಾಗೂ ಇತರ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇ ಕೆಂಬ ಅರ್ಜಿ ವಿಚಾರಣೆಯನ್ನು ಮಹಾರಾಷ್ಟ್ರ ಸೆಷನ್ಸ್ ಕೋರ್ಟ್ ಗುರುವಾರ ವಿಚಾರಣೆ ನಡೆಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುವಂತೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. 

ಸಾಮಾಜಿಕ ಕಾರ್ಯಕರ್ತ ಮೋಹನಿಶ್ ಜೀವನಲಾಲ್ ಜಾಬಲ್ಪುರೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ ಕೋರ್ಟ್, ನಾಗ್ಪುರ ಪೊಲೀಸರು ಸೇರಿ ಇತರರಿಗೆ ನೋಟಿಸ್ ರವಾನಿಸಿದೆ.