ಮುಂಬೈ(ಸು.23): ಮುಂಬೈನ ಉರಾನ್​​​​ ಬಳಿ 4 ಶಸ್ತ್ರಾಸ್ತ್ರಧಾರಿಗಳ ಪ್ರವೇಶ ಶಂಕೆ ವ್ಯಕ್ತವಾಗಿದ ಹಿನ್ನಲೆಯಲ್ಲಿ ಮಹಾರಾಷ್ಟ್ರದಾದ್ಯಂತ ಹೈಅಲರ್ಟ್ ಮುಂದುವರಿದ್ದು, ನಾಲ್ವರು ಶಂಕಿತ ವ್ಯಕ್ತಿಗಳ ರೇಖಾ ಚಿತ್ರ ಬಿಡುಗಡೆ ಮಾಡಲಾಗಿದೆ.

ಮುಂಬೈ ಪೊಲೀಸರು ನಾಲ್ವರ ರೇಖಾ ಚಿತ್ರ ಬಿಡುಗಡೆ ಮಾಡಿದ್ದಾರೆ. ಮುಂಬೈನಿಂದ 47 ಕಿ.ಮೀ. ದೂರದಲ್ಲಿರುವ ಉರಾನ್​ನಲ್ಲಿ ಶಂಕಿತರಿಗಾಗಿ ನೌಕಪಡೆ, ಪೊಲೀಸರಿಂದ ಶೋಧ ಕಾರ್ಯ ಮುಂದುವರಿದಿದೆ. 

ಮುಂಬೈ, ನವಿ ಮುಂಬೈ, ಥಾಣೆ, ರಾಯಗಢ ಸೇರಿ ಮಹಾರಾಷ್ಟ್ರದ ಸಮುದ್ರ ತೀರದಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ಮಹಾರಾಷ್ಟ್ರದ ಕರಾವಳಿ ಭಾಗದಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.