* ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಯುವಸಮುದಾಯದಿಂದ ಸೋಷಿಯಲ್ ಮೀಡಿಯಾದಲ್ಲಿ ಕೆಂಪೈನ್* ಬೆಳಗಾವಿ, ಕಾರವಾರ, ನಿಪ್ಪಾಣಿ ಮೊದಲಾದ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿದ್ದು: ಮಹಾ ಸಿಎಂ ಹೇಳಿಕೆ* ಬೆಳಗಾವಿಯಲ್ಲಿ ಮರಾಠಿಗರ ಮೇಲೆ ನಿರಂತರ ದೌರ್ಜನ್ಯ: ಫಡ್ನವಿಸ್ ಕಿಡಿ* ಮರಾಠಿಗರ ನಾಡವಿರೋಧಿ ಹೇಳೀಕೆಗೆ ಕನ್ನಡಿಗರ ಆಕ್ರೋಶ
ಬೆಳಗಾವಿ(ಅ. 31): ಗಡಿನಾಡಿನಲ್ಲಿ ನಾಡವಿರೋಧಿಗರ ಪುಂಡಾಟ ಮಿತಿಮೀರಿ ಬೆಳೆಯುತ್ತಿದೆ. ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಯುವಕರು ಹೇಳುವ ದೊಡ್ಡೊಂದು ದುಷ್ಟ ಅಭಿಯಾನವು ಕುಂದಾನಗರಿಯಾದ್ಯಂತ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಪುಂಡರ ರೋಷಾವೇಶದ ಹೇಳಿಕೆಗಳು ರಾರಾಜಿಸುತ್ತಿವೆ. ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಮಹಾರಾಷ್ಟ್ರ ಮುಖ್ಯಮತ್ತಿ ದೇವೇಂದ್ರ ಫಡ್ನವಿಸ್ ಅವರು ನಾಡವಿರೋಧಿ ಮರಾಠಿಗರ ಪುಂಡಾಟಕ್ಕೆ ಧ್ವನಿಗೂಡಿಸಿದ್ದಾರೆ. ಬೆಳಗಾವಿಯಷ್ಟೇ ಅಲ್ಲ, ಕಾರವಾರ, ನಿಪ್ಪಾಣಿ ಮೊದಲಾದ ಅನೇಕ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಸಿಎಂ ಫಡ್ನವಿಸ್ ಹೇಳಿಕೆ ನೀಡುವ ಮೂಲಕ ಉದ್ಧಟತನ ಪ್ರದರ್ಶಿಸಿದ್ದಾರೆ.
ಬೆಳಗಾವಿಯಲ್ಲಿ ಮರಾಠಿಗರ ಮೇಲೆ ನಿರಂತರ ಅನ್ಯಾಯ ನಡೆಯುತ್ತಿದೆ. ಅಲ್ಲಿಯ ಯುವ ಮರಾಠ ಸಮುದಾಯದವರು ಕರ್ನಾಟಕದ ವಿರುದ್ಧ ಧ್ವನಿ ಎತ್ತುತ್ತಿರುವುದು ನ್ಯಾಯಯುತವಾಗಿಯೇ ಇದೆ ಎಂದು ಬಿಜೆಪಿ ಮುಖಂಡರೂ ಆಗಿರುವ ದೇವೇಂದ್ರ ಫಡ್ನವಿಸ್ ಬೇಜವಾಬ್ದಾರಿಯುತವಾಗಿ ಮಾತನಾಡಿದ್ದಾರೆ.
ಬೆಳಗಾವಿಯನ್ನು ಕರ್ನಾಟಕದಿಂದ ಬೇರ್ಪಡಿಸಬೇಕು ಎಂದು ಒತ್ತಾಯಿಸುವ ಮರಾಠಿಗರ ನಾಡವಿರೋಧಿ ಧೋರಣೆ ಹಾಗೂ ಮಹಾರಾಷ್ಟ್ರ ಸಿಎಂ ಫಡ್ನವಿಸ್ ಅವರ ಉದ್ಧಟತನದ ಹೇಳಿಕೆಗಳ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
