ಬಿಜೆಪಿ ಯುವ ನಾಯಕನೊಬ್ಬ ಸಾರ್ವಜನಿಕ ಬಸ್'ವೊಂದರಲ್ಲಿ ತನ್ನ ಬಳಿ ಕುಳಿತಿದ್ದ ಮಹಿಳೆಗೆ ಕಿಸ್ ನೀಡಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಈ ಘಟನೆಯ ವಿಡಿಯೋ ಕುಡಾ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದವು. ಇದೀಗ ಘಟನೆ ನಡೆದ ಒಂದು ವಾರದ ಬಳಿಕ ಬಿಜೆಪಿ ನಾಯನನ್ನು ಪೊಲೀಸರು ಬಂಧಿಸಿದ್ದಾರೆ.  

ಮಹಾರಾಷ್ಟ್ರ(ಜು.05): ಬಿಜೆಪಿ ಯುವ ನಾಯಕನೊಬ್ಬ ಸಾರ್ವಜನಿಕ ಬಸ್'ವೊಂದರಲ್ಲಿ ತನ್ನ ಬಳಿ ಕುಳಿತಿದ್ದ ಮಹಿಳೆಗೆ ಕಿಸ್ ನೀಡಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಈ ಘಟನೆಯ ವಿಡಿಯೋ ಕುಡಾ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದವು. ಇದೀಗ ಘಟನೆ ನಡೆದ ಒಂದು ವಾರದ ಬಳಿಕ ಬಿಜೆಪಿ ನಾಯನನ್ನು ಪೊಲೀಸರು ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಜೆಪಿ ಯುವ ನಾಯಕ ರವೀಂದ್ರ ಭವಂತಡೆ ಎಂಬವರು ಜೂನ್ 27ರಂದು ಸಾರ್ವಜನಿಕ ಬಸ್'ವೊಂದರಲ್ಲಿ ತನ್ನ ಬಳಿ ಕುಳಿತಿದ್ದ ಮಹಿಳೆಗೆ ಬಲಾತ್ಕಾರದಿಂದ ಮುತ್ತು ನೀಡಿದ್ದರು ಎಂಬ ಆರೋಪ ಕೇಳಿ ಬಂದಿದೆ ಅಲ್ಲದೇ ಇದಕ್ಕೆ ಸಾಕ್ಷಿ ಎಂಬಂತೆ ಬಸ್'ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಈ ದೃಶ್ಯಗಳು ಸೆರೆಯಾಗಿವೆ. ಆದರೆ ಕೆಲ ದಿನಗಳಿಂದ ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡಲಾರಂಭವಾಗಿವೆ. ಹೀಗಾಗಿ ಎಚ್ಚೆತ್ತ ಮಹಿಳೆ ಮಹಾರಾಷ್ಟ್ರದ ಚಂದನಪುರ ಪೊಲೀಸ್ ಠಾಣೆಗೆ ತೆರಳಿ ಬಿಜೆಪಿ ನಾಯಕನ ವಿರುದ್ಧ ದೂರು ನೀಡಿದ್ದಾಳೆ. ತನ್ನ ದೂರಿನಲ್ಲಿ 'ಬಿಜೆಪಿ ನಾಯಕ 'ನಿನಗೆ ಕೆಲಸ ಕೊಡಿಸುತ್ತೇನೆ. ಅಲ್ಲದೇ ನಿನ್ನೊಂದಿಗೆಯೇ ನಾನು ಮದುವೆಯಾಗುತ್ತೇನೆ ಎಂಬ ಭರವಸೆ ನೀಡಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ' ಎಂದು ತಿಳಿಸಿದ್ದಾಳೆ.

ಈಕೆಯ ಈ ದೂರು ಪಡೆದ ಪೊಲೀಸರು ಬಸ್'ನಲ್ಲಿದ್ದ ಇತರ ಪ್ರಯಾಣಿಕರನ್ನು ವಿಚಾರಣೆ ನಡೆಸಿದಾಗ ಬಿಜೆಪಿ ನಾಯಕ ಆ ಮಹಿಳೆಗೆ ಒತ್ತಾಯಪೂರ್ವಕವಾಗಿ ಮುತ್ತು ನೀಡಿದ್ದ ಎಂದು ತಿಳಿಸಿದ್ದಾರೆ. ಅಲ್ಲದೇ ಬಸ್'ನಲ್ಲಿದ್ದ ಸಿಸಿಟಿವಿ ದೇಶ್ಯಗಳೂ ಲಭ್ಯವಾಗಿದ್ದರಿಂದ ದೂರು ದಾಖಲಿಸಿಕೊಂಡ ಪೊಲೀಸರು ಬಿಜೆಪಿ ನಾಯಕನನ್ನು ಅತ್ಯಾಚಾರ ಆರೋಪದಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.