ದಿನದಿಂದ ದಿನಕ್ಕೆ ದೇಶದಲ್ಲಿ ಪೆಟ್ರೋಲ್ ದರ ಭಾರಿ ಪ್ರಮಾಣದಲ್ಲಿಯೇ ಏರಿಕೆಯಾಗುತ್ತಿದೆ. ಪೆಟ್ರೋಲ್ ಬೆಲೆ ಏರಿಕೆಯು ಸದಾ ಚರ್ಚೆಯಾಗುತ್ತಲೇ ಇದ್ದು, ವಾಹನ ಸವಾರರ ಬೆಲೆ ಏರಿಕೆ ಬಿಸಿಗೆ ಕಂಗೆಟ್ಟಿದ್ದಾರೆ. ಆದರೆ ನಿಮಗಿಲ್ಲಿದೆ ಒಂದು ಗುಡ್ ನ್ಯೂಸ್
ಮುಂಬೈ : ದಿನದಿಂದ ದಿನಕ್ಕೆ ದೇಶದಲ್ಲಿ ಪೆಟ್ರೋಲ್ ದರ ಭಾರಿ ಪ್ರಮಾಣದಲ್ಲಿಯೇ ಏರಿಕೆಯಾಗುತ್ತಿದೆ. ಪೆಟ್ರೋಲ್ ಬೆಲೆ ಏರಿಕೆಯು ಸದಾ ಚರ್ಚೆಯಾಗುತ್ತಲೇ ಇದ್ದು, ವಾಹನ ಸವಾರರು ಪೆಟ್ರೋಲ್ ಬೆಲೆ ಏರಿಕೆ ಬಿಸಿಗೆ ಕಂಗೆಟ್ಟಿದ್ದಾರೆ. ಒಂದು ಲೀಟರ್ ಪೆಟ್ರೋಲ್ ದರವು 80ರು. ಸಮೀಪಕ್ಕೆ ತಲುಪಿದೆ.
ಆದರೆ ಇದೀಗ ವಾಹನ ಸವಾರರಿಗೆ ಒಂದು ಗುಡ್ ನ್ಯೂಸ್ ಇಲ್ಲಿದೆ. ಇಂದಿನ ಮಾರುಕಟ್ಟೆ ದರಕ್ಕಿಂತ 4 ರು. ಕಡಿಮೆಯಲ್ಲಿ ಪೆಟ್ರೋಲ್ ದೊರೆಯುತ್ತಿದೆ. ಆದರೆ ನೀವು ಕಡಿಮೆ ದರದಲ್ಲಿ ಪೆಟ್ರೋಲ್ ಪಡೆದುಕೊಳ್ಳಲು ಮಹರಾಷ್ಟ್ರಕ್ಕೆ ಹೋಗಬೇಕು.
ಅಂದರೆ ಎಂಎನ್ ಎಸ್ ಮಹರಾಷ್ಟ್ರದಾದ್ಯಂತ ಇಂದು 4 ರು. ಕಡಿಮೆ ದರದಲ್ಲಿ ಪೆಟ್ರೋಲ್ ನೀಡಲು ನಿರ್ಧಾರ ಮಾಡಿದೆ. ಕಳೆದ ತಿಂಗಳು ಪೆಟ್ರೋಲ್ ದರ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದ ಎಂಎನ್ ಎಸ್ ಅಧ್ಯಕ್ಷ ರಾಜ್ ಠಾಕ್ರೆ ಜನ್ಮ ದಿನದ ಹಿನ್ನೆಲೆಯಲ್ಲಿ ಜೂನ್ 14ರಂದು ರಾಜ್ಯದ 48 ಪಂಪ್ ಗಳಲ್ಲಿ ರಿಯಾಯಿತಿ ದರದಲ್ಲಿ ಪೆಟ್ರೋಲ್ ನೀಡಲು ತೀರ್ಮಾನಿಸಿತ್ತು.
ಅದರಂತೆ ಇಂದು ಪೆಟ್ರೋಲ್ ದರದ ಮೇಲೆ ಭರ್ಜರಿಯಾಗಿ ರಿಯಾಯಿತಿ ನೀಡುತ್ತಿದೆ.
