ಬಿಜೆಪಿ ಕಚೇರಿ ಎದುರು ಕಳೆದ 5 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಮಹದಾಯಿ ಹೋರಾಟಗಾರರು ಇದೀಗ ರಾಜಭವನ ಚಲೋ ಪಾದಯಾತ್ರೆ ಆರಂಭಿಸಿದ್ದಾರೆ. ಮಹದಾಯಿಗಾಗಿ ಹೋರಾಟ ತೀವ್ರಗೊಂಡಿದೆ. ಪಾದಯಾತ್ರೆ ಮೂಲಕ ರ‍್ಯಾಲಿ ನಡೆಸುತ್ತಿದ್ದಾರೆ. ರಾಜಭವನಕ್ಕೆ ತೆರಳಿ ಅಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದ್ದಾರೆ. ತದ ನಂತರ ಸಿಎಂ ನಿವಾಸಕ್ಕೆ ಭೇಟಿ ನೀಡಿ ಅವರಿಗೂ ಮನವಿ ಸಲ್ಲಿಸಲಿದ್ದಾರೆ. ಜೊತೆಗೆ ಬಿಎಸ್'ವೈ, ದೇವೇಗೌಡರಿಗೂ ಮನವಿ ಸಲ್ಲಿಸಲಿದ್ದಾರೆ.
ಬೆಂಗಳೂರು(ಡಿ.27): ಬಿಜೆಪಿ ಕಚೇರಿ ಎದುರು ಕಳೆದ 5 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಮಹದಾಯಿ ಹೋರಾಟಗಾರರು ಇದೀಗ ರಾಜಭವನ ಚಲೋ ಪಾದಯಾತ್ರೆ ಆರಂಭಿಸಿದ್ದಾರೆ. ಮಹದಾಯಿಗಾಗಿ ಹೋರಾಟ ತೀವ್ರಗೊಂಡಿದೆ. ಪಾದಯಾತ್ರೆ ಮೂಲಕ ರ್ಯಾಲಿ ನಡೆಸುತ್ತಿದ್ದಾರೆ. ರಾಜಭವನಕ್ಕೆ ತೆರಳಿ ಅಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದ್ದಾರೆ. ತದ ನಂತರ ಸಿಎಂ ನಿವಾಸಕ್ಕೆ ಭೇಟಿ ನೀಡಿ ಅವರಿಗೂ ಮನವಿ ಸಲ್ಲಿಸಲಿದ್ದಾರೆ. ಜೊತೆಗೆ ಬಿಎಸ್'ವೈ, ದೇವೇಗೌಡರಿಗೂ ಮನವಿ ಸಲ್ಲಿಸಲಿದ್ದಾರೆ.
ರ್ಯಾಲಿಗೆ ಕನ್ನಡ ಪರ ಹೋರಾಟಗಾರು, ಶಾಸಕ ಪುಟ್ಟಣ್ಣಯ್ಯ, ಸಾಹಿತಿ ದೇವನೂರು ಮಹಾದೇವ, ನಟ ಪ್ರಥಮ್ ಸಾಥ್ ನೀಡಿದ್ದಾರೆ.
ಇನ್ನು 4 ಜಿಲ್ಲೆಗಳಲ್ಲಿ ನಡೆಯುತ್ತಿರುವ ಮಹದಾಯಿ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಗದಗ, ಧಾರವಾಡದಲ್ಲಿ ಉಪವಾಸ ಧರಣಿ ಮಾಡುವ ಮೂಲಕ ಹೋರಾಟಗಾರರು ಬೆಂಬಲ ಸೂಚಿಸಿದ್ದಾರೆ. ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿವೆ.
ಧಾರವಾಡಕ್ಕೆ ಹಾಲು ವಿತರಿಸಲು ಬಂದಿದ್ದ ಬಸವರಾಜ ಎನ್ನು ರೈತ ಪ್ರತಿಭಟನೆ ನೋಡಿ ಎಲ್ಲ ಪ್ರತಿಭಟನಾಕಾರರಿಗೆ ಉಚಿತ ಹಾಲು ವಿತರಿಸಿ, ಗ್ರಾಮಕ್ಕೆ ತೆರಳಿದ್ದಾರೆ.
