ಸಂತಾನೋತ್ಪತ್ತಿಗೆ ಕೈದಿಗೆ 2 ವಾರಗಳ ರಜೆ..!

news | Friday, January 26th, 2018
Suvarna Web Desk
Highlights

ಮಕ್ಕಳನ್ನು ಹೊಂದುವ ತನ್ನ ಆಶಯ ಪೂರೈಸಿಕೊಳ್ಳಲು ತನ್ನ ಪತಿಗೆ ರಜೆ ನೀಡಬೇಕೆಂಬ ಮಹಿಳೆಯೊಬ್ಬರ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠ, ಕುಖ್ಯಾತ ಕೈದಿಯೊಬ್ಬನಿಗೆ 2 ವಾರದ ಸಂತಾನೋತ್ಪತ್ತಿ ರಜೆ ನೀಡಿದೆ.

ಮದುರೈ: ಮಕ್ಕಳನ್ನು ಹೊಂದುವ ತನ್ನ ಆಶಯ ಪೂರೈಸಿಕೊಳ್ಳಲು ತನ್ನ ಪತಿಗೆ ರಜೆ ನೀಡಬೇಕೆಂಬ ಮಹಿಳೆಯೊಬ್ಬರ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠ, ಕುಖ್ಯಾತ ಕೈದಿಯೊಬ್ಬನಿಗೆ 2 ವಾರದ ಸಂತಾನೋತ್ಪತ್ತಿ ರಜೆ ನೀಡಿದೆ.

ಸಿದ್ಧಿಕ್ ಅಲಿ (40) ಎಂಬಾತ ಜೀವಾವಧಿಗೆ ಶಿಕ್ಷೆಗೆ ಗುರಿಯಾಗಿದ್ದು ಸದ್ಯ ಪಾಲಯಂಕೊಟ್ಟಾಯ್ ಸೆಂಟ್ರಲ್ ಜೈಲಿನಲ್ಲಿ ಇದ್ದಾನೆ. ಈ ಹಿಂದೆ ಈತ ಹಲವು ಬಾರಿ ಪರೋಲ್‌ಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಪೊಲೀಸರು ವಿರೋಧಿಸಿದ್ದರು.

ಆತನಿಗೆ ಹೊರ ಕಳುಹಿಸಿದರೆ, ಜೀವಕ್ಕೆ ಅಪಾಯ ಇದೆ ಎಂದು ವಾದಿಸಿದ್ದರು. ಹೀಗಾಗಿ ಆತನ ಪರೋಲ್ ಅರ್ಜಿ ತಿರಸ್ಕೃತ ಗೊಂಡಿದ್ದವು. ಈ ನಡುವೆ ಇತ್ತೀಚೆಗೆ ಅಲಿಯ ಪತ್ನಿ, ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ, ತಾನು ಮಕ್ಕಳನ್ನು ಹೊಂದುವ ಆಸೆ ಹೊಂದಿದ್ದು, ಇದಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಪತಿಗೆ 2 ವಾರ ರಜೆ ನೀಡಬೇಕೆಂದು ಕೋರಿದ್ದರು. ಈ ಹಿನ್ನೆಲೆಯಲ್ಲಿ ಕೈದಿಗೆ ಎರಡು ವಾರಗಳ ಪರೋಲ್‌ಗೆ ಕೋರ್ಟ್ ಅನುಮತಿ ನೀಡಿದೆ.

Comments 0
Add Comment

  Related Posts

  SC ST Act Effect May Enter Karnataka Part 2

  video | Thursday, April 5th, 2018

  SC ST Act Effect May Enter Karnataka Part 2

  video | Thursday, April 5th, 2018

  SC ST Act Effect May Enter Karnataka Part 1

  video | Thursday, April 5th, 2018

  SC ST Act Effect May Enter Karnataka Part 1

  video | Thursday, April 5th, 2018

  SC ST Act Effect May Enter Karnataka Part 2

  video | Thursday, April 5th, 2018
  Suvarna Web Desk