ಭೂಮಿಗೆ ಕಾದಿದೆಯಾ ಭಾರಿ ಗಂಡಾಂತರ ಎನ್ನುವ ಪ್ರಶ್ನೆ ಎದುರಾಗಿದೆ. ಭೂಮಿಯ ಗುರುತ್ವಾಕರ್ಷಣೆಗೆ ಆಕರ್ಷಿಸಿದ ಕ್ಷುದ್ರಗ್ರಹವೊಂದು ಭೂಮಿಯ ಸಮೀಪ ಧಾವಿಸಿದೆ ಎನ್ನಲಾಗುತ್ತಿದೆ.
ಬೆಂಗಳೂರು (ಅ.12): ಅತ್ಯಾಚಾರ ಆರೋಪಿ, ಸ್ವಯಂ ಘೋಷಿತ ದೇವ ಮಾನವ , ಕಳಂಕಿತ ಸ್ವಾಮೀಜಿ ಇಂತಹ ವಿಶೇಷಣಗಳಿಂದಲೇ ಕುಖ್ಯಾತಿ ಗಳಿಸಿರುವ ನಿತ್ಯಾನಂದನಿಗೆ ಮದ್ರಾಸ್ ಹೈಕೋರ್ಟ್ ಮತ್ತೊಮ್ಮೆ ತಪರಾಕಿ ನೀಡಿದೆ. ಮಧುರೈನಲ್ಲಿರುವ ಅಧೀನಂ ಪೀಠದೊಳಗೆ ಪ್ರವೇಶಿಸಲು ಮತ್ತು ಪೀಠದ ಆಡಳಿತದಲ್ಲಿ ತಲೆ ಹಾಕದಂತೆ ನಿತ್ಯಾನಂದ ಮತ್ತು ಆತನ ಹಿಂಬಾಲಕರಿಗೆ ಮದ್ರಾಸ್ ಹೈಕೋರ್ಟ್ ನಿಷೇಧ ಹೇರಿದೆ. ರಾಸಲೀಲೆ ಪ್ರಕರಣದಿಂದ ಕುಖ್ಯಾತಿ ಗಳಿಸಿದ್ದ ನಿತ್ಯಾನಂದ ಈಗ ಮತ್ತೆ ಸುದ್ದಿಯಲ್ಲಿದ್ದಾನೆ.
ಕನ್ನಡಿಗರಿಂದ ತಿರಸ್ಕಾರಕ್ಕೊಳಗಾಗಿರುವ ಕಳಂಕಿತ ಸ್ವಾಮಿ ನಿತ್ಯಾನಂದ ಹೇಗಾದರೂ ಮಾಡಿ ತಮಿಳುನಾಡಿನ ಮಠಗಳಲ್ಲಿ ಜಾಗ ಗಟ್ಟಿ ಮಾಡಿಕೊಳ್ಳುವ ಹವಣಿಕೆಯಲ್ಲಿದ್ದಾನೆ. ಪೊಲೀಸ್ ರಕ್ಷಣೆಯೊಂದಿಗೆ ಮದುರೈ ಅಧೀನಂ ಪೀಠ ಪ್ರವೇಶಿಸಲು ಅನುಮತಿ ನೀಡಬೇಕೆಂದು ನಿತ್ಯಾನಂದ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠ ಮಠಕ್ಕೆ ಕಾಲಿಡದಂತೆ ಸೂಚನೆ ನೀಡಿದೆ. ನಿತ್ಯಾನಂದನಾಗಲೀ ಆತನ ಹಿಂಬಾಲಕರಾಗಲಿ ಇನ್ನು ಮುಂದೆ ಆಧೀನಂ ಮಠದತ್ತ ಸುಳಿಯುವಂತಿಲ್ಲ.
ತಮಿಳುನಾಡಿನ ನಾಲ್ಕು ಪ್ರಖ್ಯಾತ ಮಠಗಳು ತನಗೇ ಸೆರಬೇಕು ಎಂದು ಹೇಳಿಕೊಂಡು ಅಲ್ಲಿನ ಆಸ್ತಿ ಕಬಳಿಸಲು ಯತ್ನಿಸಿದ್ಗ ನಿತ್ಯಾನಂದನಿಗೆ ಕಳೆದ ವರ್ಷ ಮದ್ರಾಸ್ ಹೈಕೋರ್ಟ್ ಚಾಟಿ ಬೀಸಿತ್ತು. ನಾಲ್ಕೂ ಮಠಗಳಿಗೆ ತಾನೇ ಮುಖ್ಯಸ್ಥ ಎಂದು ಘೋಷಿಸುವಂತೆ ನಿತ್ಯಾನಂದ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿತ್ತು. ಈಗ ಮತ್ತೆ ತಮಿಳುನಾಡಿನಲ್ಲಿ ನಿತ್ಯಾನಂದನಿಗೆ ಮುಖಭಂಗವಾದಂತಾಗಿದೆ.
