Asianet Suvarna News Asianet Suvarna News

ಎಲ್ಲಾ ಶಾಲೆಗಳು, ಸರ್ಕಾರಿ-ಖಾಸಗಿ ಕಚೇರಿಗಳಲ್ಲಿ ವಂದೇ ಮಾತರಂ ಕಡ್ಡಾಯ: ಮದ್ರಾಸ್ ಹೈಕೋರ್ಟ್

ತಮಿಳುನಾಡಿನ ಎಲ್ಲಾ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಖಾಸಗಿ ಉದ್ದಿಮೆಗಳಲ್ಲಿ ವಂದೇ ಮಾತರಂ ಹಾಡುವುದನ್ನು ಮದ್ರಾಸ್ ಹೈಕೋರ್ಟ್ ಕಡ್ಡಾಯಗೊಳಿಸಿದೆ.  ಶಾಲೆಗಳಲ್ಲಿ ವಾರಕ್ಕೊಂದು ದಿನ ಸೋಮವಾರ ಅಥವಾ ಶುಕ್ರವಾರ ಹಾಡಬೇಕು. ಉಳಿದಂತೆ ಸರ್ಕಾರಿ ಕಛೇರಿಗಳು, ಸಂಸ್ಥೆಗಳು, ಖಾಸಗಿ ಕಂಪನಿಗಳಲ್ಲಿ ತಿಂಗಳಿಗೊಮ್ಮೆ ಹಾಡಬೇಕು ಎಂದು ನ್ಯಾ. ಎಂ.ವಿ ಮುರುಳಿಧರನ್ ನೇತೃತ್ವದ ಪೀಠ ಆದೇಶ ನೀಡಿದೆ.

Madras HC makes Vande Mataram mandatory in schools govt and private offices

ಚೆನ್ನೈ (ಜು.25): ತಮಿಳುನಾಡಿನ ಎಲ್ಲಾ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಖಾಸಗಿ ಉದ್ದಿಮೆಗಳಲ್ಲಿ ವಂದೇ ಮಾತರಂ ಹಾಡುವುದನ್ನು ಮದ್ರಾಸ್ ಹೈಕೋರ್ಟ್ ಕಡ್ಡಾಯಗೊಳಿಸಿದೆ.  ಶಾಲೆಗಳಲ್ಲಿ ವಾರಕ್ಕೊಂದು ದಿನ ಸೋಮವಾರ ಅಥವಾ ಶುಕ್ರವಾರ ಹಾಡಬೇಕು. ಉಳಿದಂತೆ ಸರ್ಕಾರಿ ಕಛೇರಿಗಳು, ಸಂಸ್ಥೆಗಳು, ಖಾಸಗಿ ಕಂಪನಿಗಳಲ್ಲಿ ತಿಂಗಳಿಗೊಮ್ಮೆ ಹಾಡಬೇಕು ಎಂದು ನ್ಯಾ. ಎಂ.ವಿ ಮುರುಳಿಧರನ್ ನೇತೃತ್ವದ ಪೀಠ ಆದೇಶ ನೀಡಿದೆ.

ರಾಜ್ಯದ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ವಾರಕ್ಕೆರಡು ಬಾರಿ ಸೋಮವಾರ ಹಾಗೂ ಶುಕ್ರವಾರ ವಂದೇ ಮಾತರಂ ಹಾಡುವುದನ್ನು ಆಯಾ ಶಾಲೆಗಳು ಖಚಿತಪಡಿಸಬೇಕು. ಬಂಗಾಳಿ ಅಥವಾ ಸಂಸ್ಕೃತದಲ್ಲಿರುವ ಇದನ್ನು ಹಾಡುವುದು ಯಾರಿಗಾದರೂ ಕಷ್ಟವಾದಲ್ಲಿ ತಮಿಳಿಗೂ ಭಾಷಾಂತರ ಮಾಡಲಾಗಿದೆ. ಅದನ್ನು ಹಾಡಬಹುದು ಎಂದು ನ್ಯಾ. ಎಂ.ವಿ ಮುರುಳೀಧರನ್ ಹೇಳಿದ್ದಾರೆ.

ಬಂಗಾಳಿಯಲ್ಲಿರುವ ವಂದೇ ಮಾತರಂನನ್ನು ತಮಿಳು ಮತ್ತು ಇಂಗ್ಲೀಷ್’ಗೆ ಭಾಷಾಂತರ ಮಾಡಿ ಸರ್ಕಾರದ ವೆಬ್’ಸೈಟ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್’ಲೋಡ್ ಮಾಡಬೇಕೆಂದು ಸಾರ್ವಜನಿಕ ಮಾಹಿತಿ ನಿರ್ದೇಶಕರಿಗೆ ನಿರ್ದೇಶಿಸಲಾಗಿದೆ.

ಏತನ್ಮಧ್ಯೆ, ಶಾಲೆಗಳಲ್ಲಿ ವಂದೇ ಮಾತರಂನನ್ನು ಕಡ್ಡಾಯಗೊಳಿಸುವ ಬಗ್ಗೆ ಸುಪ್ರೀಂಕೋರ್ಟ್’ನಲ್ಲಿ ವಿಚಾರಣೆ ನಡೆಯುತ್ತಿದೆ.

Follow Us:
Download App:
  • android
  • ios