ಚೆನ್ನೈ (ಸೆ.19): ನಿನ್ನೆ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡ ಸಾಫ್ಟ್’ವೇರ್ ಇಂಜಿನಿಯರ್ ಸ್ವಾತಿ ಹತ್ಯೆ ಅರೋಪಿ ರಾಮ್’ಕುಮಾರ್ ಮರಣೋತ್ತರ ಪರೀಕ್ಷೆ ನಡೆಸಲು ನಾಲ್ಕು ತಜ್ಞ ವೈದ್ಯರನ್ನೊಳಗೊಂಡ ತಂಡ ರಚಿಸುವಂತೆ ಮದ್ರಾಸ್ ಹೈಕೊರ್ಟ್ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ.
ಮರಣೋತ್ತರ ಶವ ಪರೀಕ್ಷೆ ನಡೆಸುವ ತಂಡವನ್ನು ಪುನರ್ರಚಿಸುವಂತೆ ಕೋರಿ ಅರೋಪಿ ರಾಮ್ ಕುಮಾರ್ ಸಂಬಂಧಿಯೊಬ್ಬರು ಹೈಕೋರ್ಟ್ ಮೆಟ್ಟಲೇರಿದ್ದರು.
ಪೊಲೀಸರ ಪ್ರಕಾರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ರಾಮ್ ಕುಮಾರ್ ವಿದ್ಯುತ್ ತಂತಿಯನ್ನು ಕಚ್ಚಿ ಅತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಳೆದ ಜೂನ್ 24ರಂದು ಚೆನೈ’ನ ನುಂಗಂಬಕ್ಕಮ್ ರೈಲು ನಿಲ್ದಾಣದಲ್ಲಿ ಸಾಫ್ಟ್’ವೆರ್ ಕಂಪನಿ ಉದ್ಯೋಗಿ ಸ್ವಾತಿಯ ಕೊಲೆಯಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಂಜಿನಿಯರಿಂಗ್ ಪದವೀಧರನಾಗಿದ್ದ ರಾಮ್ ಕುಮಾರ್ನನ್ನು ಬಂಧಿಸಿದ್ದರು.
