Asianet Suvarna News Asianet Suvarna News

ಲಂಚ ಪಾವತಿಸದ್ದಕ್ಕೆ ವಿಳಂಬವಾದ ವಿವಾಹ: ಕೊನೆಗೆ ಮಗುವಿನ ಸಮ್ಮುಖದಲ್ಲೇ ನಡೆಯಿತು ಮದುವೆ

ಮಧ್ಯಪ್ರದೇಶದ ಬೇತುಲ್‌ ಜಿಲ್ಲೆಯಲ್ಲಿ ಭಾನುವಾರ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ದಿವ್ಯಾಂಗ ಜೋಡಿಯೊಂದು ತಮ್ಮ ಐದು ತಿಂಗಳ ಮಗು ವನ್ನು ತೊಡೆಯಲ್ಲಿ ಕೂರಿಸಿಕೊಂಡೇ ವೈವಾಹಿಕ ಜೀವನಕ್ಕೆ ಪಾದಾರ್ಪಣೆಗೈದ ಅಪರೂಪದ ಘಟನೆ ನಡೆದಿದೆ.

Madhyapradesh Couple Ties Knot With Baby

ಭೋಪಾಲ್(ಮಾ.21): ಮಧ್ಯಪ್ರದೇಶದ ಬೇತುಲ್‌ ಜಿಲ್ಲೆಯಲ್ಲಿ ಭಾನುವಾರ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ದಿವ್ಯಾಂಗ ಜೋಡಿಯೊಂದು ತಮ್ಮ ಐದು ತಿಂಗಳ ಮಗು ವನ್ನು ತೊಡೆಯಲ್ಲಿ ಕೂರಿಸಿಕೊಂಡೇ ವೈವಾಹಿಕ ಜೀವನಕ್ಕೆ ಪಾದಾರ್ಪಣೆಗೈದ ಅಪರೂಪದ ಘಟನೆ ನಡೆದಿದೆ.

ಘಟನೆ ಹಿನ್ನೆಲೆ: ಬೀತುಲ್‌ನ ಆಲಂಪುರ ಗ್ರಾಮದ ಈ ಜೋಡಿ, ರಾಜ್ಯದ ಅಂತರ್‌ಜಾತಿ ವಿವಾಹ ಪ್ರೋತ್ಸಾಹ ಯೋಜನೆ ಯಡಿ ಕಳೆದ ವರ್ಷವೇ ಮದುವೆಯಾಗಲು ಬಯಸಿತ್ತು. ಈ ಯೋಜನೆಯಡಿ ಮದುವೆಯಾದರೆ 2 ಲಕ್ಷ ರು. ನಗದು ನೀಡಲಾಗುತ್ತದೆ. ಹೀಗಾಗಿ ಜೋಡಿ 2016ರ ಮಾ.6ರಂದು ತಮ್ಮ ಹೆಸರನ್ನು ನೊಂದಾಯಿಸಿತ್ತು. ಜೂ.8ರಂದು ಸಾಮೂಹಿಕ ವಿವಾಹವನ್ನು ಸರ್ಕಾರ ನಿಗದಿ ಮಾಡಿತ್ತು. ವಿವಾಹ ಖಚಿತ ಎಂದು ನಂಬಿದ ಜೋಡಿ ಲೈಂಗಿಕ ಸಂಪರ್ಕ ಬೆಳೆಸಿತ್ತು. ಈ ನಡುವೆ ಮದುವೆ ದಿನ ನಿಗದಿತ ಸ್ಥಳಕ್ಕೆ ಹೋದರೆ ಅಲ್ಲಿ ಅವರ ಹೆಸರೇ ಇರಲಿಲ್ಲ. ಕೇಳಿದರೆ ಅಧಿಕಾರಿಗಳು ಸಬೂಬು ಹೇಳಿ ಕಳುಹಿಸಿದರು. ಕೊನೆಗೆ ಅಧಿಕಾರಿಗಳು ಕೇಳಿದ್ದ 3000 ರು. ಲಂಚ ನೀಡಲು ಸಾಧ್ಯವಾಗದೇ ಹೋಗಿದ್ದಕ್ಕೆ ಜೋಡಿಯ ಹೆಸರನ್ನು ಕೈಬಿಡಲಾಗಿತ್ತು ಎಂಬ ವಿಷಯ ಬೆಳಕಿಗೆ ಬಂದಿತ್ತು.

ಈ ನಡುವೆ ಹುಡುಗಿ ಗರ್ಭ ಧರಿಸಿ ಮಗುವನ್ನು ಹೆತ್ತಿದ್ದಳು. ಇತ್ತೀಚೆಗೆ ಈ ಜೋಡಿ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ತಮ್ಮ ಗೋಳನ್ನು ಹೇಳಿಕೊಂಡಿತ್ತು. ಕೊನೆಗೆ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಜೋಡಿಯ ಹೆಸರನ್ನು ಕಳೆದ ವಾರ ಇದೇ ಯೋಜನೆಯಡಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸೇರಿಸಲಾಗಿತ್ತು. ಅಲ್ಲಿ ಕೊನೆಗೂ ಜೋಡಿ ವಿವಾಹ ಬಂಧನಕ್ಕೆ ಒಳಪಟ್ಟಿತು. ಕೊನೆಗೆ ಈ ಮದುವೆ ಮಗುವಿನ ಸಮ್ಮುಖದಲ್ಲೇ ನಡೆಯಿತು.

ವರದಿ: ಕನ್ನಡ ಪ್ರಭ

ಚಿತ್ರ ಕೃಪೆ: ಹಿಂದೂಸ್ಥಾನ್ ಟೈ

Follow Us:
Download App:
  • android
  • ios