ಭೋಪಾಲ್[ಜು. 24] ಇಬ್ಬರು ಬಿಜೆಪಿ ಶಾಸಕರು ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದಾರೆ. ಸಿಎಂ ಕಮಲ್ ನಾಥ್ ಬೆಂಬಲಿಸಿ ವೋಟ್ ಮಾಡಿದ್ದಾರೆ.

ನಾವು  ಬಿಜೆಪಿಯನ್ನು ಇಷ್ಟಪಡದ ಸ್ಥಿತಿ ನಿರ್ಮಾಣವಾಗಿದ್ದು ಮಹಾಘಟಬಂಧನ ಸೇರಲಿದ್ದೇವೆ ಎಂದು ಬಿಜೆಪಿ ಶಾಸಕರಾದ ನಾರಾಯಣ ತ್ರಿಪಾಠಿ, ಶರದ್ ಕೌಲ್ ಹೇಳಿದ್ದು ಮಧ್ಯಪ್ರದೇಶಲ್ಲಿ ಅಧಿಕಾರ ಹಿಡಿಯುವ ಕನಸಿನಲ್ಲಿದ್ದ ಬಿಜೆಪಿಗೆ ದೊಡ್ಡ ಆಘಾತವಾಗಿದೆ.

ಕರ್ನಾಟಕ ರಾಜಕಾರಣದ ಗೊಂದಲಗಳು: ಆರಂಭದಿಂದ ಅಂತ್ಯದವರೆಗೆ

ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ಸಿಗ ಸುರೇಶ್ ಚೌರಿ ಅವರನ್ನು ಇಬ್ಬರು ಶಾಸಕರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬಿಜೆಪಿಗೆ ರಾಜೀನಾಮೆ ನೀಡದಿದ್ದರೂ ಅಸೆಂಬ್ಲಿಯಲ್ಲಿ ಕಾಂಗ್ರೆಸ್ ಮಂಡಿಸಿದ ಬಿಲ್ ಪರವಾಗಿ ಇಬ್ಬರು ಶಾಸಕರು ವೋಟ್ ಮಾಡಿ  ಬಿಜೆಪಿಗೆ ಶಾಕ್ ನೀಡಿದ್ದಾರೆ.

ವಿಶ್ವಾಸಮತಕ್ಕೆ ಗೈರಾಗಿದ್ದ ಕೈ ಶಾಸಕನಿಗೆ ಬಿಗ್ ರಿಲೀಫ್, ಕೇಸು ಖುಲಾಸೆ

ಕ್ರಿಮನಿಲ್ ಲಾ ಮಸೂದೆಯನ್ನು ಕಮಲ್ ನಾಥ್ ಸರ್ಕಾರ ಮಂಡನೆ ಮಾಡಿತ್ತು. 230 ಬಲದ ವಿಧಾನಸಭೆಯಲ್ಲಿ ಮಸೂದೆ ಪರ 122 ಮತಗಳು ಬಂದಿದ್ದವು. ಕಾಂಗ್ರೆಸ್ ಸ್ಪೀಕರ್ ಅವರನ್ನು ಸೇರಿ 121 ಶಾಸಕರ ಬಲ ಹೊಂದಿದೆ. ಸ್ಪೀಕರ್ ವೋಟ್ ಮಾಡದಿದ್ದರೂ ಮಸೂದೆ ಪರವಾಗಿ 122 ಮತಗಳು ಬಂದಿದ್ದವು.

ಹಿಂದೆ ಕಾಂಗ್ರೆಸ್‌ ನಲ್ಲಿಯೇ ಇದ್ದ ಶಾಸಕರು ಇದೀಗ ಘರ್ ವಾಪಸಿ ಮಾಡುತ್ತಿದ್ದಾರೆ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಮಧ್ಯಪ್ರದೇಶ ವಿಧಾನಸಭೆ ಬಲಾಬಲ 230

ಕಾಂಗ್ರೆಸ್ - 114

ಬಿಎಸ್‌ಪಿ- 2

ಎಸ್‌ಪಿ- 1

ಸ್ವತಂತ್ರ-4 

ಬಿಜೆಪಿ 106