Asianet Suvarna News Asianet Suvarna News

ನಂ.1 ಹುಲಿ ರಾಜ್ಯ ಮಧ್ಯಪ್ರ​ದೇ​ಶದಲ್ಲಿ ಒಂದೇ ವಾರದಲ್ಲಿ 3 ಹುಲಿ ಸಾವು!

ನಂ.1 ಹುಲಿ ರಾಜ್ಯ ಮಧ್ಯಪ್ರ​ದೇ​ಶದಲ್ಲಿ ವಾರದಲ್ಲಿ 3 ಹುಲಿ ಸಾವು| ಗಣತಿ ವರದಿ ಬಿಡು​ಗ​ಡೆಗೊಂಡ ನಾಲ್ಕೇ ದಿನ​ದಲ್ಲಿ ಹುಲಿಗಳ ಕಾದಾಟ, ಬಲಿ!

Madhya Pradesh Retains Tiger State Status With 526 Tigers In Forest
Author
Bangalore, First Published Aug 1, 2019, 9:04 AM IST
  • Facebook
  • Twitter
  • Whatsapp

ಉಮ​ರಿ​ಯಾ[ಆ.01]: ಸೋಮ​ವಾ​ರ​ವಷ್ಟೇ ಹುಲಿ ಗಣತಿ ಬಿಡು​ಗಡೆ ಮಾಡಿದ್ದ ಪ್ರಧಾನಿ ಮೋದಿ ದೇಶದಲ್ಲೇ ಅತಿ ಹೆಚ್ಚಿನ ಹುಲಿ​ಗ​ಳನ್ನು ಹೊಂದಿ​ರುವ ರಾಜ್ಯ​ವೆಂದು ಮಧ್ಯ​ಪ್ರ​ದೇ​ಶ​ವನ್ನು (526) ಘೋಷಿ​ಸಿ​ದ್ದರು.

ಎರ​ಡನೇ ಸ್ಥಾನ​ಕ್ಕೆ (524) ಕರ್ನಾ​ಟಕ ತೃಪ್ತಿ​ಪ​ಟ್ಟು​ಕೊಂಡಿತ್ತು. ಆದರೆ ಗಣತಿ ವರದಿ ಬಿಡು​ಗ​ಡೆಗೊಂಡ ನಾಲ್ಕೇ ದಿನ​ದಲ್ಲಿ ಮಧ್ಯ​ಪ್ರ​ದೇ​ಶದ ವಿವಿಧ ಹುಲಿ ಅಭ​ಯಾ​ರ​ಣ್ಯ​ಗ​ಳಲ್ಲಿ ಪರ​ಸ್ಪರ ಕಾದಾ​ಡಿ​ಕೊಂಡು ಒಂದು ಗಂಡು, ಒಂದು ಹೆಣ್ಣು ಹಾಗೂ ಒಂದು ಹುಲಿ ಮರಿ ಸೇರಿದಂತೆ ಒಟ್ಟು ಮೂರು ಹುಲಿ​ಗಳು ಸಾವ​ನ್ನ​ಪ್ಪಿವೆ.

ಅರಣ್ಯ ಪ್ರದೇ​ಶ​ದ​ಲ್ಲಿನ ತಮ್ಮ ವ್ಯಾಪ್ತಿ ಹಂಚಿಕೆ ಕುರಿತು ಹುಲಿ​ಗಳು ಪರ​ಸ್ಪರ ಕಾದಾ​ಡು​ವುದು ಸಾಮಾನ್ಯ. ಹೀಗೆ ಕಾದಾ​ಟ​ದಲ್ಲಿ ಈ ಹುಲಿ​ಗಳು ಸಾವ​ನ್ನ​ಪ್ಪಿವೆ ಎಂದು ಫಾರೆಸ್ಟ್‌ ರೇಂಜರ್‌ ಪಿ.ಕೆ.​ತ್ರಿ​ಪಾಠಿ ಮಾಹಿತಿ ನೀಡಿ​ದ್ದಾ​ರೆ.

Follow Us:
Download App:
  • android
  • ios