ಇತರ ಜಾತಿಯವರನ್ನೂ ಪುರೋಹಿತರನ್ನಾಗಿ ತರಬೇತಿ ನೀಡುವ ಪ್ರಸ್ತಾವನೆಯ ವಿರುದ್ಧ ಕಳೆದ ವರ್ಷದ ಮೇನಲ್ಲಿ ಬ್ರಾಹ್ಮಣರು ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಿದ್ದರು.

ಭೋಪಾಲ್(ಏ.06): ಕೇವಲ ಬ್ರಾಹ್ಮಣರಿಗಷ್ಟೇ ಸೀಮಿತವಾಗಿದ್ದ ಪೌರೋಹಿತ್ಯವನ್ನು ಸಾರ್ವತ್ರಿಕಗೊಳಿಸಲು ಮಧ್ಯ ಪ್ರದೇಶ ಸರ್ಕಾರ ಮುಂದಾಗಿದ್ದು, ಅರ್ಚಕ ಹುದ್ದೆಗೆ ಒಂದು ವರ್ಷದ ಡಿಪ್ಲೊಮಾ ಕೋರ್ಸ್‌ವೊಂದನ್ನು ಆರಂಭಿಸಲಿದೆ. ಹಿಂದುಳಿದ ವರ್ಗ ಮತ್ತು ಬ್ರಾಹ್ಮಣ ಎನ್ನದೇ ಯಾರು ಬೇಕಾದರೂ ಈ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಇತರ ಜಾತಿಯವರನ್ನೂ ಪುರೋಹಿತರನ್ನಾಗಿ ತರಬೇತಿ ನೀಡುವ ಪ್ರಸ್ತಾವನೆಯ ವಿರುದ್ಧ ಕಳೆದ ವರ್ಷದ ಮೇನಲ್ಲಿ ಬ್ರಾಹ್ಮಣರು ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಿದ್ದರು. ಇದರ ಹೊರತಾಗಿಯೂ ಸರ್ಕಾರ ಕೋರ್ಸ್ ಆರಂಭಿಸುತ್ತಿದೆ. ಜುಲೈನಲ್ಲಿ ‘ಪೌರೋಹಿತ್ಯಂ’ ಹೆಸರಿನ ಒಂದು ವರ್ಷದ ಡಿಪ್ಲೊಮಾ ಕೋರ್ಸ್ ಆರಂಭವಾಗಲಿದೆ.

ಪೌರೋಹಿತ್ಯದ ಬಗೆಗಿನ ಮೂಲ ಮಾಹಿತಿ, ಮಂತ್ರಗಳು ಮತ್ತು ಆಚರಣೆಗಳ ಕುರಿತು ಹೇಳಿಕೊಡಲಾಗುತ್ತಿದೆ. ಅಲ್ಲದೇ ಕೋರ್ಸ್ ಆಕಾಂಕ್ಷಿಗಳಿಗೆ ಸಂಸ್ಕಾರ ಸಾಹಿತ್ಯದ ಪಾಠವನ್ನು ಹೇಳಿಕೊಡಲಾಗುವುದು ಎಂದು ಮಹಶ್ರಿ ಪತಂಜಲಿ ಸಂಸ್ಕೃತ ಸಂಸ್ಥಾನದ ನಿರ್ದೇಶಕ ಪಿಆರ್‌ತಿವಾರಿ ಹೇಳಿದ್ದಾರೆ.