ಕಾಂಗ್ರೆಸ್ ನಾಯಕ ಕಮಲ್ನಾಥ್ ಅವರು ಮಧ್ಯಪ್ರದೇಶದ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ರೈತರ ಸಾಲ ಮನ್ನಾ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಭೋಪಾಲ್, (ಡಿ.17): 15 ವರ್ಷಗಳ ಬಳಿಕ ಮಧ್ಯಪ್ರದೇಶದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು, ಇಂದು (ಸೋಮವಾರ) ಕಮಲ್ನಾಥ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಪ್ರಮಾಣವಚನ ಸ್ವೀಕಾರ ಮುಗಿಯುತ್ತಿದ್ದಂತೆ ಸಂಪುಟ ಸಭೆ ನಡೆಸಿದ ಕಮಲ್ನಾಥ್, ಕೃಷಿ ಸಾಲ ಮನ್ನಾ ಕಡತಕ್ಕೆ ಸಹಿ ಹಾಕಿ ಮಾತಿಗೆ ನಡೆದುಕೊಂಡಿದ್ದಾರೆ.
'ಕೈ' ನಾಯಕರ ಗೆಲುವನ್ನು ಸಂಭ್ರಮಿಸಿದ ಬಿಜೆಪಿ ಲೀಡರ್ ಶಿವರಾಜ್ ಸಿಂಗ್ ಚೌಹಾಣ್!
2 ಲಕ್ಷ ರೂಪಾಯಿ ಮಿತಿಯೊಳಗೆ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡಲಾಗಿದೆ ಎಂದು ಸಿಎಂ ಕಮಲ್ನಾಥ್ ಘೋಷಿಸಿದ್ದಾರೆ.
ವೈರಲ್ ಚೆಕ್| ರೈತರ ಸಾಲಮನ್ನಾ: ಗೆದ್ದಾಕ್ಷಣ ಉಲ್ಟಾಹೊಡೆದ ರಾಹುಲ್ ಗಾಂಧಿ!?
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಕೃಷಿ ಸಾಲ ಮನ್ನಾ ಮಾಡುವುದಾಗಿ ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿದ್ದರು. ಅದರಂತೆ ಇಂದು ತಮ್ಮ ಮಾತಿಗೆ ಬದ್ಧರಾಗಿದ್ದಾರೆ.
