ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ತುಂಬಾ ಚೆನ್ನಾಗಿಯೇ ಹೊರಟಿತ್ತು. ಫಸ್ಟ್ ಕ್ಲಾಸ್ ಆಗಿನೇ ನಡೆದಿತ್ತು.  ಆದರೆ ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮಿಜಿ ಬಾಯಿಗೆ ಬಂದಂಗೆ ಮಾತನಾಡಿ ನಮ್ಮ ಹೋರಾಟವನ್ನು ಹೊಳೆಯಲ್ಲಿ  ಹುಣಸಿ ಹಣ್ಣು ತೊಳದಂಗ ಮಾಡಿಬಿಟ್ಟರು ಎಂದು ನೀರಾವರಿ ಸಚಿವ ಎಂ ಬಿ ಪಾಟೀಲ್ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಹುಬ್ಬಳ್ಳಿ (ನ.23): ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ತುಂಬಾ ಚೆನ್ನಾಗಿಯೇ ಹೊರಟಿತ್ತು. ಫಸ್ಟ್ ಕ್ಲಾಸ್ ಆಗಿನೇ ನಡೆದಿತ್ತು. ಆದರೆ ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮಿಜಿ ಬಾಯಿಗೆ ಬಂದಂಗೆ ಮಾತನಾಡಿ ನಮ್ಮ ಹೋರಾಟವನ್ನು ಹೊಳೆಯಲ್ಲಿ ಹುಣಸಿ ಹಣ್ಣು ತೊಳದಂಗ ಮಾಡಿಬಿಟ್ಟರು ಎಂದು ನೀರಾವರಿ ಸಚಿವ ಎಂ ಬಿ ಪಾಟೀಲ್ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಪ್ರತ್ಯೇಕ ಲಿಂಗಾಯತ ಧರ್ಮದ ಸಮಾವೇಶದಲ್ಲಿ ಇದೇ ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮಿಜಿ ಒಂದು ತಲೆಗೆ ಹುಟ್ಟಿದವರು ಲಿಂಗಾಯತರು 5 ತಲೆಗೆ ಹುಟ್ಟಿದವರು ಜಂಗಮರು ಎಂದು ಹೇಳುವ ಮೂಲಕ ಭಾರಿ ವಿವಾ ದ ಸೃಷ್ಟಿಸಿದ್ದರು. ಆದರೆ ಆಗ ಅದೇ ಸ್ವಾಮೀಜಿ ಹೇಳಿಕೆ ಬಗ್ಗೆ ಇದೇ ನೀರಾವರಿ ಸಚಿವ ಎಂ ಬಿ ಪಾ ಟೀಲ್ ಸಮರ್ಥಿಸಿಕೊಂಡಿದ್ದರು. ಆದರೆ ನಿನ್ನೆಯಷ್ಟೇ ವಿಜಯಪುರದ ಫ ಗು ಹಳಕಟ್ಟಿ ಭವನದಲ್ಲಿ ನಡೆದ ಲಿಂಗಾಯತ್ ಸಭೆಯಲ್ಲಿ ನೀರಾವರಿ ಸಚಿವ ಎಂ ಬಿ ಪಾಟೀಲ್ ಸ್ವಾಮೀಜಿ ವಿರುದ್ಧ ಕಿಡಿಕಾರಿದ್ದಾರೆ. ಇದೀಗ ಸಚಿವ ಎಂ ಬಿ ಪಾಟೀಲ್ ಮಾತನಾಡಿರುವ ಆಡಿಯೋ ಭಾರಿ ವೈರಲ್ ಆಗಿದ್ದು ಸಚಿವರು ತಮ್ಮ ಸ್ವಾರ್ಥಕ್ಕೆ ಏನೂ ಬೇಕಾದರೂ ಮಾಡುತ್ತಾರೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.