ಸಚಿವ ಎಮ್ ಬಿ ಪಾಟೀಲ್ ತುಮಕೂರಿನ ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿಯನ್ನು ಸಿದ್ದೇಶ್ವರ ಸ್ವಾಮೀಜಿ ಎಂದು ಹೇಳಿ ಎಡವಟ್ಟು ಮಾಡಿದ್ದಾರೆ.
ಬೆಂಗಳೂರು (ಮಾ. 28): ಸಚಿವ ಎಮ್ ಬಿ ಪಾಟೀಲ್ ತುಮಕೂರಿನ ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿಯನ್ನು ಸಿದ್ದೇಶ್ವರ ಸ್ವಾಮೀಜಿ ಎಂದು ಹೇಳಿ ಎಡವಟ್ಟು ಮಾಡಿದ್ದಾರೆ.
ತುಮಕೂರು ಮಠದಲ್ಲಿ ನೀರಿನ ಘಟಕ ಉದ್ಘಾಟನಾ ಕಾರ್ಯಕ್ರಮ ಇತ್ತು. ನೀತಿ ಸಂಹಿತೆ ಕಾರಣ ಕಾರ್ಯಕ್ರಮ ರದ್ದು ಮಾಡಲಾಗಿತ್ತು. ಶ್ರೀಗಳ ಆಶೀರ್ವಾದ ಪಡೆದ ಪಾಟೀಲರು ಲಿಂಗಾಯತ ಪ್ರತ್ಯೇಕ ಧರ್ಮದ ಶಿಪಾರಸ್ಸು ಮಾಡಿದ ಬಗ್ಗೆ ಕಿರಿಯ ಶ್ರೀಗಳು ಸ್ವಾಗತಿಸಿದ್ದಾರೆ. ಹಾಗಾಗಿ ಶ್ರೀಗಳೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದೇನೆ. ಮುಂದಿನ ಹೋರಾಟಕ್ಕೆ ಕಿರಿಯ ಶ್ರೀಗಳ ಮಾರ್ಗದರ್ಶನ ಇರಲಿದೆ. ಅವರ ಮಾರ್ಗದರ್ಶನದಂತೆ ನಾವು ಮುಂದಿನ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಅಮಿತ್ ಷಾ ವಿರೋಧದ ಬಗ್ಗೆ ಪ್ರತಿಕ್ರಿಯಿಸುತ್ತಾ, ಅಮಿತ್ ಷಾಗೆ ಟಾಂಗ್ ನೀಡಿದ್ದಾರೆ. ಜೈನ ಸಮುದಾಯದವರು ಕೇಂದ್ರದಿಂದ ಜೈನ ಧರ್ಮಕ್ಕೆ ಪ್ರತ್ಯೇಕತೆ ಸಿಕ್ಕಾಗ ಆಗ ಸಮಾಜ ಒಡೆಯಲಿಲ್ವಾ ಎಂದು ಅಮಿತ್ ಷಾ ಗೆ ಎಮ್ ಬಿ ಪಾಟೀಲ್ ಪ್ರಶ್ನಿಸಿದ್ದಾರೆ.
