ತಾರಿಕ್ ಸಾದಿಕ್ ಎಂಬಾತ ತಾವು ಬಳಸುತ್ತಿದ್ದ ಲೈಫ್ ಮೊಬೈಲ್ ಅಗ್ನಿಗಾಹುತಿಯಾದ ಫೋಟೋವನ್ನ ಟ್ವಿಟ್ಟರ್`ನಲ್ಲೆ ಶೇರ್ ಮಾಡಿರುವುದಾಗಿ ಇಂಡಿಯಾ ಟುಡೇ ವರದಿಮಾಡಿದೆ. ಆದರೆ, ಬೆಂಕಿ ಹೊತ್ತಿಕೊಂಡ ಮೋಬೈಲ್ ಲೈಫ್`ನ ಯಾವ ಬ್ರಾಂಡ್ ಎಂಬ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. ಈ ಕುರಿತಂತೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಂಪನಿ, ಘಟನೆ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದೆ.

ನವದೆಹಲಿ(ನ.07): ಬಹುಶಃ 2016ನೇ ವರ್ಷ ಮೊಬೈಲ್ ಫೋನ್`ಗಳ ಬರ್ನಿಂಗ್ ಇಯರ್ ಎಂದು ಕರೆದರೂ ತಪ್ಪಿಲ್ಲ ಅನ್ನಿಸುತ್ತೆ. ಸಾಮ್ಸಂಗ್ ಗ್ಯಾಲಕ್ಸಿ ನೋಟ್-7 ಬೆಂಕಿ ಹೊತ್ತಿಕೊಂಡ ಬಗ್ಗೆ ಸುದ್ದಿಗಳು ಕೇಳಿಬಂದ ಬೆನ್ನಲ್ಲೇ ಇದೀಗ ನೂತನ ರಿಲಯನ್ಸ್ ಜಿಯೋ ಮೊಬೈಲ್`ಗೂ ಬೆಂಕಿ ಹೊತ್ತಿಕೊಂಡ ಬಗ್ಗೆ ವರದಿಯಾಗಿದೆ.