ಸೇವಾ ಹಿರಿತನದ ಆಧಾರದಲ್ಲಿ ನೂತನ ಮುಖ್ಯಸ್ಥರ ಹುದ್ದೆಗೆ ಅರ್ಹರಾಗಿದ್ದ ಪೂರ್ವ ಕಮಾಂಡ್ ಮುಖ್ಯಸ್ಥರಾಗಿದ್ದ ಲೆ|ಜ| ಪ್ರವೀಣ್ ಬಕ್ಷಿ ಬದಲಿಗೆ ಕೇಂದ್ರ ಸರ್ಕಾರವು ಲೆ|ಜ| ಬಿಪಿನ್ ರಾವತ್ ಹೆಸರನ್ನು ಅಂತಿಮಗೊಳಿಸಿತ್ತು.

ನವದೆಹಲಿ (ಡಿ.21): ಸೇವಾ ಹಿರಿತನವನ್ನು ಪರಿಗಣಿಸದೇ ಭೂಸೇನೆಗೆ ನೂತನ ಮುಖ್ಯಸ್ಥರನ್ನು ನೇಮಿಸಿರುವ ಕೇಂದ್ರ ಸರ್ಕಾರದ ಕ್ರಮವು ರಾಜಕೀಯ ವಿವಾದವನ್ನು ಸೃಷ್ಟಿಸಿರುವ ಬೆನ್ನಲ್ಲೇ, ಹಿರಿಯ ಅಧಿಕಾರಿ ಲೆ|| ಪ್ರವೀಣ್ ಬಕ್ಷಿ ಇಂದು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಅವರನ್ನು ಭೇಟಿಯಾಗಿದ್ದಾರೆ.

ಸೇವಾ ಹಿರಿತನದ ಆಧಾರದಲ್ಲಿ ನೂತನ ಮುಖ್ಯಸ್ಥರ ಹುದ್ದೆಗೆ ಅರ್ಹರಾಗಿದ್ದ ಪೂರ್ವ ಕಮಾಂಡ್ ಮುಖ್ಯಸ್ಥರಾಗಿದ್ದ ಲೆ|| ಪ್ರವೀಣ್ ಬಕ್ಷಿ ಬದಲಿಗೆ ಕೇಂದ್ರ ಸರ್ಕಾರವು ಲೆ|| ಬಿಪಿನ್ ರಾವತ್ ಹೆಸರನ್ನು ಅಂತಿಮಗೊಳಿಸಿತ್ತು.

ಸೇನಾ ಮುಖ್ಯಸ್ಥರ ನೇಮಕಾತಿ ವಿಚಾರದಲ್ಲಿ ದಶಕಗಳಿಂದ ನಡೆದು ಬಂದ ಸಂಪ್ರದಾಯವನ್ನು ಸರ್ಕಾರ ಮುರಿದಿದೆ ಎಂದು ಪ್ರತಿಪಕ್ಷಗಳು ಆಕ್ಷೇಪಿಸಿವೆ.

ಲೆ|| ಬಿಪಿನ್ ರಾವತ್ಕ್ಕಿಂತಲೂ ಹೆಚ್ಚು ಅನುಭವ ಹೊಂದಿದ್ದ ಲೆ|| ಪ್ರವೀಣ್ ಬಕ್ಷಿ ಹಾಗೂ ಲೆ|| ಪಿಏ ಹಾರಿಝ್ ಅಂಥವರನ್ನು ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಭೂಸೇನೆಯ ನೂತನ ಮುಖ್ಯಸ್ಥರನ್ನಾಗಿ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಹಾಗೂವಾಯುಸೇನೆಯ ಏರ್ ಮಾರ್ಷಲ್ ಆಗಿ ಬೀರೇಂಧರ್ ಸಿಂಗ್ ಧನೋವಾರನ್ನು ಕೇಂದ್ರ ಸರ್ಕಾರ ನೇಮಿಸಿದೆ.

ಡಿಸೆಂಬರ್ 31 ರಂದು ಹಾಲಿ ಭೂಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ನಿವೃತ್ತಲಾಗಲಿದ್ದಾರೆ.