ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಸಚಿವರು, ಜೂನ್ 1ರಿಂದಲೇ 4ರೂ.ಏರಿಕೆ ಆದೇಶ ಜಾರಿಯಾಗಿದೆ. ಕೇಂದ್ರ ಸರ್ಕಾರ ಈಗಾಗಲೇ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳು 14.2 ಕೆಜಿ ತೂಕದ ಸಿಲಿಂಡರ್'ಅನ್ನು ಪ್ರತಿ ತಿಂಗಳು 2 ರೂ. ಏರಿಕೆ ಮಾಡಬೇಕೆಂದು ತಿಳಿಸಿತ್ತು.
ನವದೆಹಲಿ(ಜು.31): ಮುಂದಿನ ವರ್ಷದ ಮಾರ್ಚ್ ವೇಳೆಗೆ ಎಲ್'ಪಿಜಿ ಸಬ್ಸಿಡಿಯನ್ನು ರದ್ದು ಮಾಡಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ 2018 ಮಾರ್ಚ್'ನಿಂದ ಎಲ್'ಪಿಜಿ ದರ ಮತ್ತಷ್ಟು ಏರಿಕೆಯಾಗಲಿದೆ.
ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಸಚಿವರು, ಜೂನ್ 1ರಿಂದಲೇ 4ರೂ.ಏರಿಕೆ ಆದೇಶ ಜಾರಿಯಾಗಿದೆ. ಕೇಂದ್ರ ಸರ್ಕಾರ ಈಗಾಗಲೇ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳು 14.2 ಕೆಜಿ ತೂಕದ ಸಿಲಿಂಡರ್'ಅನ್ನು ಪ್ರತಿ ತಿಂಗಳು 2 ರೂ. ಏರಿಕೆ ಮಾಡಬೇಕೆಂದು ತಿಳಿಸಲಾಗಿತ್ತು ಎಂದು ಹೇಳಿದ್ದಾ.
ಪ್ರತಿ ಗೃಹಬಳಕೆದಾರರಿಗೆ ಸಬ್ಸಿಡಿ ಆಧಾರದ ಮೇಲೆ 14.2 ತೂಕದ ಸಿಲಿಂಡರ್'ಅನ್ನು ವರ್ಷದಲ್ಲಿ 12 ನೀಡಲಾಗುತ್ತಿತ್ತು. ಅದಕ್ಕಿಂತ ಹೆಚ್ಚು ಅಗತ್ಯವಿದ್ದರೆ ಮಾರುಕಟ್ಟೆ ಬೆಲೆಕೊಟ್ಟು ಖರೀದಿಸಬೇಕಿತ್ತು. ತೈಲ ಕಂಪನಿಗಳು ಈಗಾಗಲೇ ಎಲ್'ಪಿಜಿ ಸಿಲಿಂಡರ್ ಬೆಲೆ 2 ಬಾರಿ ಏರಿಸಿದ ಪರಿಣಾಮ ಪ್ರತಿ ಸಿಲಿಂಡರ್'ಗೆ 32 ಏರಿಕೆಯಾಗಿತ್ತು.
