Asianet Suvarna News Asianet Suvarna News

ಎಲ್'ಪಿಜಿ ಶಾಕ್; ಬರೋಬ್ಬರಿ 93 ರೂಪಾಯಿ ಏರಿಕೆ; ಸಬ್ಸಿಡಿಗೂ ಕೊಕ್ಕೆ

* ಸಬ್ಸಿಡಿರಹಿತ ಎಲ್'ಪಿಜಿ ಸಿಲಿಂಡರ್ ದರದಲ್ಲಿ 93 ರೂ ಏರಿಕೆ

* ಸಬ್ಸಿಡಿಯುಕ್ತ ಎಲ್'ಪಿಜಿ ದರದಲ್ಲಿ 4.6 ರೂ ಏರಿಕೆ

* ಬೆಂಗಳೂರಲ್ಲಿ 14.2 ಕಿಲೋ ಎಲ್'ಪಿಜಿ ಗ್ಯಾಸ್ ದರ 486.50 ಮತ್ತು 744.50 ರೂಪಾಯಿಗೆ ಏರಿಕೆ

* 2018ರ ಮಾರ್ಚ್'ನಷ್ಟರಲ್ಲಿ ಎಲ್'ಪಿಜಿ ಸಬ್ಸಿಡಿ ಸಂಪೂರ್ಣ ಕೈಬಿಡಲು ಕೇಂದ್ರದ ಗುರಿ

lpg gas cylinder rates sharp increase

ನವದೆಹಲಿ: ಸಬ್ಸಿಡಿರಹಿತ ಅಡುಗೆ ಅನಿಲದ ಬೆಲೆ ಬರೋಬ್ಬರಿ 93 ರೂಪಾಯಿ ಏರಿಕೆ ಆಗಿದೆ. ಗ್ಯಾಸ್ ಸಬ್ಸಿಡಿ ಪೂರ್ಣವಾಗಿ ರದ್ದುಗೊಳಿಸುವ ತನ್ನ ಅಂತಿಮ ಗುರಿಯತ್ತ ಹೆಜ್ಜೆ ಇಟ್ಟಿರುವ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಸಬ್ಸಿಡಿಯುಕ್ತ ಅಡುಗೆ ಅನಿಲದ ಬೆಲೆಯನ್ನೂ ಸ್ವಲ್ಪ ಏರಿಕೆ ಮಾಡಿದೆ. ನಿನ್ನೆ ಸಬ್ಸಿಡಿಸಹಿತ ಗ್ಯಾಸ್ ಸಿಲಿಂಡರ್ ಬಲೆ 4.60 ರೂ ಏರಿಕೆ ಮಾಡಲಾಗಿದೆ.

ಸಬ್ಸಿಡಿಸಹಿತ 14.2 ಕಿಲೋ ಎಲ್'ಪಿಜಿ ಸಿಲಿಂಡರ್'ನ ಬೆಲೆಯು ರಾಜಧಾನಿ ದೆಹಲಿಯಲ್ಲಿ ಈಗ 495.69 ಆಗಿದೆ. ಬೆಂಗಳೂರಿನಲ್ಲಿ ಇದರ ಬೆಲೆ 486.50 ರೂ'ಗೆ ಏರಿಕೆಯಾಗಿದೆ.

ಸಬ್ಸಿಡಿರಹಿತ ಸಿಲಿಂಡರ್'ಗಳ ಬೆಲೆ  ದಿಲ್ಲಿಯಲ್ಲಿ 742 ರೂಪಾಯಿಗೆ ಏರಿಕೆಯಾಗಿದೆ. ಬೆಂಗಳೂರಲ್ಲಿ ಇದರ ಬೆಲೆ 744.50 ರೂಪಾಯಿ ಆಗಿದೆ.

ಭಾರತದಲ್ಲಿ ಎಲ್'ಪಿಜಿ ಗ್ಯಾಸ್'ಗೆ ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರ ಸಂಖ್ಯೆ 18.11 ಕೋಟಿ ಇದೆ. ಸಬ್ಸಿಡಿ ಇಲ್ಲದ ಗ್ರಾಹಕರ ಪ್ರಮಾಣ 2.66 ಕೋಟಿ ಇದೆ. ಸಬ್ಸಿಡಿ ಮತ್ತು ನಾನ್-ಸಬ್ಸಿಡಿ ಬೆಲೆಗಳ ನಡುವಿನ ಅಂತರ ಈಗ ಇನ್ನಷ್ಟು ತಗ್ಗಿದೆ. 2018ರ ಮಾರ್ಚ್'ನಷ್ಟರಲ್ಲಿ ಎಲ್'ಪಿಜಿ ಸಬ್ಸಿಡಿಯನ್ನು ಪೂರ್ಣವಾಗಿ ನಿಲ್ಲಿಸುವ ಗುರಿ ಕೇಂದ್ರ ಸರಕಾರದ್ದಾಗಿದೆ. ಸದ್ಯಕ್ಕೆ ಒಬ್ಬ ಎಲ್'ಪಿಜಿ ಗ್ರಾಹಕರಿಗೆ ಪ್ರತೀ ವರ್ಷ 14.2 ಕಿಲೋ ತೂಕದ 12 ಗ್ಯಾಸ್ ಸಿಲೆಂಡರ್'ಗಳನ್ನು ಸಬ್ಸಿಡಿ ದರದಲ್ಲಿ ಕೊಡಲಾಗುತ್ತದೆ. ಹೆಚ್ಚುವರಿ ಸಿಲಿಂಡರ್'ಗಳಿಗೆ ಸಬ್ಸಿಡಿರಹಿತ (ಕಮರ್ಷಿಯಲ್) ದರ ವಿಧಿಸಲಾಗುತ್ತಿದೆ.

epaperkannadaprabha.com

Follow Us:
Download App:
  • android
  • ios