Asianet Suvarna News Asianet Suvarna News

ನ್ಯಾ.ಲೋಯಾ ಸಾವಿನ ಅನುಮಾನಕ್ಕೆ ಮತ್ತಷ್ಟುರೆಕ್ಕೆಪುಕ್ಕ!

ಮಹಾರಾಷ್ಟ್ರದಲ್ಲಿ ವಿವಾಹವೊಂದರ ಸಮಾರಂಭಕ್ಕೆ ಹೋಗಿ, ಅಲ್ಲಿಯೇ ಕುಸಿದುಬಿದ್ದು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದ ನ್ಯಾ.ಬಿ.ಎಚ್‌.ಲೋಯಾ ಅವರ ಸಾವು ಹೃದಯಾಘಾತದಿಂದ ಆಗಿರುವುದು ಎಂಬ ಅಧಿಕೃತ ಪ್ರತಿಪಾದನೆಯನ್ನು ಭಾರತೀಯ ವಿಧಿವಿಜ್ಞಾನದ ತಜ್ಞರಾದ ಡಾ.ಆರ್‌.ಕೆ.ಶರ್ಮಾ ಅವರು ಅಲ್ಲಗೆಳೆದಿದ್ದಾರೆ.

Loya Death Case

ನವದೆಹಲಿ: ಮಹಾರಾಷ್ಟ್ರದಲ್ಲಿ ವಿವಾಹವೊಂದರ ಸಮಾರಂಭಕ್ಕೆ ಹೋಗಿ, ಅಲ್ಲಿಯೇ ಕುಸಿದುಬಿದ್ದು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದ ನ್ಯಾ.ಬಿ.ಎಚ್‌.ಲೋಯಾ ಅವರ ಸಾವು ಹೃದಯಾಘಾತದಿಂದ ಆಗಿರುವುದು ಎಂಬ ಅಧಿಕೃತ ಪ್ರತಿಪಾದನೆಯನ್ನು ಭಾರತೀಯ ವಿಧಿವಿಜ್ಞಾನದ ತಜ್ಞರಾದ ಡಾ.ಆರ್‌.ಕೆ.ಶರ್ಮಾ ಅವರು ಅಲ್ಲಗೆಳೆದಿದ್ದಾರೆ.

ಲೋಯಾ ಅವರ ಮೆದುಳಿಗೆ ಹಾನಿ ಮತ್ತು ವಿಷವುಣಿಸಿಯೂ ಇರಬಹುದು ಎಂಬಂಥ ಕುರುಹುಗಳು ಸಿಕ್ಕಿವೆ ಎಂದು ದೆಹಲಿಯ ಏಮ್ಸ್‌ನಲ್ಲಿ ವೈದ್ಯಕೀಯ ವಿಧಿ ವಿಜ್ಞಾನ ಮತ್ತು ವಿಷಶಾಸ್ತ್ರದ ವಿಭಾಗದ ಮಾಜಿ ಮುಖ್ಯಸ್ಥ ಡಾ.ಆರ್‌.ಕೆ.ಶರ್ಮಾ ಅವರು ಅಭಿಪ್ರಾಯಪಟ್ಟಿದ್ದಾರೆ.

ಲೋಯಾ ಸಾವಿನ ಕುರಿತು ಆರ್‌ಟಿಐ ಮಾಹಿತಿ ಅನ್ವಯ ಮತ್ತು ಮಹಾರಾಷ್ಟ್ರ ಸರ್ಕಾರದಿಂದ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿರುವ ವರದಿಗಳನ್ನು ಕ್ರೋಢಿಕರಿಸಿ, ಅಧ್ಯಯನ ಮಾಡಿರುವ ಡಾ.ಶರ್ಮಾ ಅವರು, ‘ಲೋಯಾ ಅವರ ಮರಣೋತ್ತರ ಸೇರಿದಂತೆ ಯಾವುದೇ ವರದಿಯಲ್ಲಿ ಹೃದಯಘಾತದಿಂದ ಸಾವಿಗೀಡಾಗಿದ್ದಾರೆ ಎಂಬುದನ್ನು ಪುಷ್ಟೀಕರಿಸುವ ಅಂಶಗಳೇ ಇಲ್ಲ,’ ಎಂದು ಹೇಳಿದ್ದಾರೆ.

ಅಲ್ಲದೆ, ಲೋಯಾ ಅವರು ಹೃದಯಾಘಾತಕ್ಕೊಳಗಾದ ಎರಡು ಗಂಟೆಗಳ ಬಳಿಕ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆದರೆ, ಹೃದಯಾಘಾತ ಸಂಭವಿಸಿದ ಬಳಿಕ ಓರ್ವ ಅರ್ಧ ಗಂಟೆ ಬದುಕುಳಿದಿದ್ದಾನೆ ಎಂದರೆ, ಆತನ ಹೃದಯಾಘಾತದಿಂದ ಸಾವನ್ನಪ್ಪುವುದಿಲ್ಲ. ಏತನ್ಮಧ್ಯೆ, ಲೋಯಾ ಅವರ ಮೆದುಳಿನ ಭಾಗವಾದ ದೂರಾ ಎಂಬ ಪದರದ ಮೇಲೆ ಗಾಯವಾಗಿದ್ದು, ಲೋಯಾ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದೆ ಎಂಬುದನ್ನು ಸಾರುತ್ತದೆ ಎಂದು ಡಾ.ಶರ್ಮಾ ಪ್ರತಿಪಾದಿಸಿದ್ದಾರೆ.

Follow Us:
Download App:
  • android
  • ios