ಪ್ರಧಾನಮಂತ್ರಿ ನರೇಂದ್ರಮೋದಿ 500 ಮತ್ತು 1000 ರೂ. ಹಳೇ ನೋಟನ್ನ ನಿಷೇಧ ಮಾಡಿದ್ದೇ ತಡ ಕಾಳಧನಿಕರಿಗೆ ನಿದ್ದೆ ಬರುತ್ತಿಲ್ಲ. ಹಲವೆಡೆ ಹಣವನ್ನ ಸುಟ್ಟಿದ್ದನ್ನ, ಹರಿದು ಹಾಕಿದ ಸುದ್ಧಿಯನ್ನ ನೋಡಿದ್ದೇವೆ. ಇದೀಗ ಬೆಮಗಳೂರು ಸನಿಹದಲ್ಲೇ ಇಂಥದ್ದೊಂದು ಘಟನೆ ನಡೆದಿದೆ.

ಬೆಂಗಳೂರು(ನ.13): ಪ್ರಧಾನಮಂತ್ರಿ ನರೇಂದ್ರಮೋದಿ 500 ಮತ್ತು 1000 ರೂ. ಹಳೇ ನೋಟನ್ನ ನಿಷೇಧ ಮಾಡಿದ್ದೇ ತಡ ಕಾಳಧನಿಕರಿಗೆ ನಿದ್ದೆ ಬರುತ್ತಿಲ್ಲ. ಹಲವೆಡೆ ಹಣವನ್ನ ಸುಟ್ಟಿದ್ದನ್ನ, ಹರಿದು ಹಾಕಿದ ಸುದ್ಧಿಯನ್ನ ನೋಡಿದ್ದೇವೆ. ಇದೀಗ ಬೆಮಗಳೂರು ಸನಿಹದಲ್ಲೇ ಇಂಥದ್ದೊಂದು ಘಟನೆ ನಡೆದಿದೆ.

ಹೊಸಕೋಟೆ ಸಮೀಪದ ಎಲೆಮಲ್ಲಪ್ಪನ ಕೆರೆಗೆ 500, 1000 ನೋಟುಗಳನ್ನ ತಂದು ಸುರಿಯಲಾಗಿದೆ. ಪ್ರಭಾವಿ ವ್ಯಕ್ತಿಗೆ ಸೇರಿದ ಹಣವಿದು ಎನ್ನಲಾಗುತ್ತಿದ್ದು, ಪತ್ತೆಯಾದ ಹಣ ಖೋಟಾ ನೋಟು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಕೆರೆಯ ಸುತ್ತಮುತ್ತ ನೆರೆದಿರುವ ಜನ ಹಣ ಆಯ್ದುಕೊಳ್ಳಲು ಮುಗಿಬಿದ್ದಿದ್ದಾರೆ. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದ್ದು, ಪರಿಶೀಲನ ನಡೆಯುತ್ತಿದೆ.