ವಿಮಾ ಕಂತಿನ ಮೇಲೆ ವಿಧಿಸಿರುವ ದರ ಹಾಗೂ  ಹಲವು ಬೇಡಿಕೆಗಳಿಗೆ ಆಗ್ರಹಿಸಿ ನಡೆಸುತ್ತಿರೋ ಲಾರಿ ಮಾಲಿಕರ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆಯಷ್ಟೆ ನಡೆದಿರುವ ಐಆರ್​ಡಿಎ ಸಂಧಾನ ಸಭೆಯೂ ವಿಫಲಗೊಂಡಿದ್ದು, ಮುಷ್ಕರ ಮತ್ತೆ ತೀವ್ರಗೊಂಡಿದೆ. ನಾಳೆಯಿಂದ ಪೆಟ್ರೋಲ್, ಡೀಸೆಲ್ ಟ್ಯಾಂಕರ್​ಗಳು ಮುಷ್ಕರಕ್ಕೆ ಕೈ ಜೋಡಿಸಲಿದ್ದು, ಮತ್ತಷ್ಟು ಸಮಸ್ಯೆ ತಲೆದೋರಲಿದೆ.

ಬೆಂಗಳೂರು (ಏ.04): ವಿಮಾ ಕಂತಿನ ಮೇಲೆ ವಿಧಿಸಿರುವ ದರ ಹಾಗೂ ಹಲವು ಬೇಡಿಕೆಗಳಿಗೆ ಆಗ್ರಹಿಸಿ ನಡೆಸುತ್ತಿರೋ ಲಾರಿ ಮಾಲಿಕರ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆಯಷ್ಟೆ ನಡೆದಿರುವ ಐಆರ್​ಡಿಎ ಸಂಧಾನ ಸಭೆಯೂ ವಿಫಲಗೊಂಡಿದ್ದು, ಮುಷ್ಕರ ಮತ್ತೆ ತೀವ್ರಗೊಂಡಿದೆ. ನಾಳೆಯಿಂದ ಪೆಟ್ರೋಲ್, ಡೀಸೆಲ್ ಟ್ಯಾಂಕರ್​ಗಳು ಮುಷ್ಕರಕ್ಕೆ ಕೈ ಜೋಡಿಸಲಿದ್ದು, ಮತ್ತಷ್ಟು ಸಮಸ್ಯೆ ತಲೆದೋರಲಿದೆ.

ಲಾರಿ ಮಾಲೀಕರ ಅನಿರ್ಧಿಷ್ಟಾವಧಿ ಮುಷ್ಕರ ತೀವ್ರಗೊಂಡಿದ್ದು ಐದನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರದಲ್ಲಿ ರಾಜ್ಯಾದ್ಯಂತ ಏಳು ಲಕ್ಷಕ್ಕೂ ಹೆಚ್ಚು ಲಾರಿಗಳು ಭಾಗಿಯಾಗಿದ್ದು, ಅಗತ್ಯ ವಸ್ತುಗಳ ಸಾಗಣೆಯೂ ಸ್ಥಗಿತಗೊಂಡಿದೆ. 26 ಲಕ್ಷ ವಾಣಿಜ್ಯ ವಾಹನಗಳು ಸೇವೆ ಸ್ಥಗಿತಗೊಳಿಸಿವೆ. ನಿನ್ನೆಯಷ್ಟೆ ಐಆರ್​ಡಿಎ ಜೊತೆ ಲಾರಿ ಮಾಲಿಕರ ಸಂಘದ ಸಂಧಾನಸಭೆ ವಿಫಲಗೊಂಡಿದೆ. ಹೀಗಾಗಿ ನಾಳೆಯಿಂದ ಪೆಟ್ರೋಲ್, ಡೀಸೆಲ್ ಟ್ಯಾಂಕರ್​ಗಳು ಮುಷ್ಕರಕ್ಕೆ ಕೈ ಜೋಡಿಸಲಿದ್ದು ಮತ್ತಷ್ಟು ಸಮಸ್ಯೆ ಉಲ್ಬಣಿಸಲಿದೆ.

ಇನ್ನು ಮೂರು ದಿನ ಕಾಲಾವಕಾಶ ನೀಡ್ತೇವೆ. ಬಳಿಕ ನಡು ರಸ್ತೆಯಲ್ಲೆ ಲಾರಿ ನಿಲ್ಲಿಸುತ್ತೇವೆ. ಈಗಾಗಲೆ ಏಳು ಸಾವಿರದ ನೂರು ಕೋಟಿ ನಷ್ಟವಾಗಿದ್ದು, ಏಪ್ರಿಲ್ 8 ರಿಂದ ಅಖಿಲ ಭಾರತ ಲಾರಿ ಮಾಲಿಕರ ಸಂಘ ಕೂಡ ಮುಷ್ಕರಕ್ಕೆ ಕೈ ಜೋಡಿಸಲಿದೆ ಎಂದು ಲಾರೀ ಮಾಲಿಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.

 ಒಂದೆಡೆ ಬರ, ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ. ಈ ಮಧ್ಯೆ ಮುಷ್ಕರದಿಂದಾಗಿ ರೈತರ ಬೆಳೆಗೆ ಸೂಕ್ತ ಬೆಲೆ ಸಿಗ್ತಿಲ್ಲ. ಇತ್ತ ಹೊರರಾಜ್ಯದಿಂದ ಬರುವ ವಸ್ತುಗಳ ದರ ಏರಿಕೆಯಾಗಿದ್ದು ಜನಸಾಮಾನ್ಯರು ಹೈರಾಣಾಗಿದ್ದಾರೆ.