ನವದೆಹಲಿ[ಆ.03]: ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಅಧ್ಯಕ್ಷರ ಆಯ್ಕೆ ಸಂಬಂಧ ಗೃಹ ಸಚಿವ ಅಮಿತ್‌ ಶಾ ಹಾಗೂ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ನಡುವೆ ಶುಕ್ರವಾರ ರಾಜ್ಯಸಭೆಯಲ್ಲಿ ಮಾತಿನ ಜಟಾಪಟಿ ನಡೆಯಿತು.

ಮಸೂದೆಯೊಂದರ ಮೇಲಿನ ಚರ್ಚೆ ವೇಳೆ, ‘ನೀವು ವಲ್ಲಭ ಭಾಯ್‌ ಪಟೇಲ್‌ ಅವರು ಅಲಂಕರಿಸಿದ ಸ್ಥಾನದಲ್ಲಿದ್ದೀರಿ, ನೀವು ರಾಜಕೀಯ ಪ್ರೇರಿತವಾಗಿ ಮಾತನಾಡಬಾರದು. ನೀವು ನಿಮ್ಮ ಪಕ್ಷದ ಅಧ್ಯಕ್ಷ ಸ್ದಾನವನ್ನು ತ್ಯಜಿಸಿ ಜೆ.ಪಿ. ನಡ್ಡಾಗೆ ಪಟ್ಟಾಭಿಷೇಕ ಮಾಡಿ’ ಎಂದು ದಿಗ್ವಿಜಯ್‌ ಸಿಂಗ್‌ ಅವರು ಅಮಿತ್‌ ಶಾಗೆ ಮಾತಿನಲ್ಲಿ ಚುಚ್ಚಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್‌ ಶಾ ಮೊದಲು ‘ನಿಮ್ಮ ಪಕ್ಷಕ್ಕೆ ಅಧ್ಯಕ್ಷರನ್ನು ಹುಡುಕಿ’ ಎಂದು ತಿರುಗೇಟು ನೀಡಿದರು.