ಜೇನಿಸ್ ಈ ಪ್ರಯಾಣ ಜೂನ್‌ನಲ್ಲಿ ನಡೆದಿದೆ. ಇದೀಗ ಉಬರ್ ಪ್ರಯಾಣದಲ್ಲಿ ಇದು ಅತಿ ದೂರದ ಪ್ರಯಾಣ ಎಂಬ ದಾಖಲೆ ನಿರ್ಮಾಣವಾಗಿದೆ. ಸುಮಾರು 600 ಕಿಮೀ ದೂರದ 7 ಗಂಟೆ 42 ನಿಮಿಷಗಳ ಪ್ರಯಾಣಕ್ಕೆ ₹ 19,835 ಬಾಡಿಗೆಯಾಗಿದೆ.

ನ್ಯೂಯಾರ್ಕ್(ಡಿ.12): ಅಮೆರಿಕದ ಚಾಲಕಿಯೊಬ್ಬರು ಅತಿ ದೂರದವರೆಗೆ ಉಬರ್ ಟ್ಯಾಕ್ಸಿ ಚಲಾಯಿಸಿ ದಾಖಲೆ ಬರೆದಿದ್ದಾರೆ.

ಚಾಲಕಿ ಜೇನಿಸ್ ರೋಜರ್ ಎಂಬವರು ತಮ್ಮ ಗ್ರಾಹಕಿಯೊಬ್ಬರ ಬಾಯ್ ಫ್ರೆಂಡ್ ಭೇಟಿಗಾಗಿ, ಅವರೊಂದಿಗೆ ವರ್ಜಿನಿಯಾದಿಂದ ಬ್ರೂಕ್ಲಿನ್'ವರೆಗೆ ಸುಮಾರು 650 ಕಿ.ಮೀ. ದೂರ ಉಬರ್ ಚಲಾಯಿಸಿದ್ದಾರೆ.

ಜೇನಿಸ್ ತಮ್ಮ ಗ್ರಾಹಕಿಯನ್ನು ವರ್ಜಿನಿಯಾದ ವಿಲಿಯಮ್ಸ್‌'ಬರ್ಗ್‌'ನಿಂದ ತಮ್ಮ ಕಾರಲ್ಲಿ ಹತ್ತಿಸಿಕೊಂಡಿದ್ದರು. ನ್ಯೂಯಾರ್ಕ್‌ನ ಬ್ರೂಕ್ಲಿನ್‌ವರೆಗಿನ 644 ಕಿ.ಮೀ.ಗಳನ್ನು ಅವರು ಎಂಟು ಗಂಟೆಗಳಲ್ಲಿ ಕ್ರಮಿಸಿದ್ದಾರೆ. ಸಾಮಾನ್ಯವಾಗಿ ಉಬರ್ ಸರಾಸರಿ 8.7 ಕಿಮೀ ವ್ಯಾಪ್ತಿಗೆ ಚಲಾಯಿಸಲ್ಪಡುತ್ತದೆ. ಗ್ರಾಹಕಿಯನ್ನು ಬ್ರೂಕ್ಲಿನ್‌ನಲ್ಲಿ ಬಿಟ್ಟ ಬಳಿಕ, 64ರ ಹರೆಯದ ಚಾಲಕಿ ಜೇನಿಸ್ ವರ್ಜಿನಿಯಾದ ನ್ಯೂಪೋರ್ಟ್‌ನಲ್ಲಿರುವ ತಮ್ಮ ಮನೆಗೆ ಹಿಂದಿರುಗಿದ್ದಾರೆ. ಅದರಲ್ಲೂ ಆಕೆ ಎಲ್ಲೂ ವಿರಾಮವನ್ನೂ ಪಡೆಯದೆ ಈ ದೂರದ ಪ್ರಯಾಣ ಯಶಸ್ವಿಯಾಗಿ ಪೂರೈಸಿದ್ದಾರೆ.

ಜೇನಿಸ್ ಈ ಪ್ರಯಾಣ ಜೂನ್‌ನಲ್ಲಿ ನಡೆದಿದೆ. ಇದೀಗ ಉಬರ್ ಪ್ರಯಾಣದಲ್ಲಿ ಇದು ಅತಿ ದೂರದ ಪ್ರಯಾಣ ಎಂಬ ದಾಖಲೆ ನಿರ್ಮಾಣವಾಗಿದೆ. ಸುಮಾರು 600 ಕಿಮೀ ದೂರದ 7 ಗಂಟೆ 42 ನಿಮಿಷಗಳ ಪ್ರಯಾಣಕ್ಕೆ ₹ 19,835 ಬಾಡಿಗೆಯಾಗಿದೆ.

ಪ್ರಯಾಣಕ್ಕೆ ಸಿಕ್ಕ ಅಪರಿಚಿತೆಯು 19-20ರ ವಯಸ್ಸಿನವಳಾಗಿರಬಹುದು. ಆಕೆಯ ಹೆಸರನ್ನೂ ಕೇಳಲಿಲ್ಲ. ಪ್ರಯಾಣದುದ್ದಕ್ಕೂ ಆಕೆ ಮಲಗಿದ್ದಳು. ತನ್ನ ಬಾಯ್‌'ಫ್ರೆಂಡ್ ಅನ್ನು ಭೇಟಿಯಾಗುವ ಉತ್ಸಾಹ ಅವಳಲ್ಲಿದ್ದಂತೆ ಕಂಡು ಬರಲಿಲ್ಲ. ಏಕೆಂದರೆ ಆಕೆ ತುಂಬಾ ಬಳಲಿದಂತೆ ಕಂಡುಬರುತ್ತಿದ್ದಳು ಎಂದು ಜೇನಿಸ್ ಹೇಳಿದ್ದಾರೆ. ಅದೊಂದು ಲಾಭದಾಯಕ ಪ್ರಯಾಣವಲ್ಲ, ಆದರೆ ಸಾಹಸಮಯವಾಗಿತ್ತು ಎಂದು ಜೇನಿಸ್ ತಿಳಿಸಿದ್ದಾರೆ.