ಕೇಂದ್ರ ಸರ್ಕಾರಿ ಉದ್ಯೋಗಿಗಳ ಬಹುಕಾಲದ ಕಾಯುವಿಕೆಗೆ ಕೊನೆಗೂ ಫಲ ಸಿಕ್ಕಿದೆ.

ನವದೆಹಲಿ (ಮಾ.11): ಕೇಂದ್ರ ಸರ್ಕಾರಿ ಉದ್ಯೋಗಿಗಳ ಬಹುಕಾಲದ ಕಾಯುವಿಕೆಗೆ ಕೊನೆಗೂ ಫಲ ಸಿಕ್ಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

7 ನೇ ವೇತನ ಆಯೋಗದ ಶಿಫಾರಸ್ಸಿಗೆ ಸಂಪುಟ ಅಸ್ತು ಎಂದಿದ್ದು ಮುಂದಿನ ತಿಂಗಳಿಂದ ವೇತನ ಭತ್ಯೆಯನ್ನು ಪಡೆಯಲಿದ್ದಾರೆ. ಶೇ. 07 ರಷ್ಟು ಏರಿಕೆ ಮಾಡಲಾಗಿದೆ. ಕನಿಷ್ಟ ವೇತನವನ್ನು 18,000 ದಿಂದ 21, 000 ದವರೆಗೆ ಹೆಚ್ಚಿಸಲು ಸರ್ಕಾರ ಮುಂದಾಗಿದೆ. 48.41 ಲಕ್ಷ ಉದ್ಯೋಗಿಗಳು, 61.17 ಲಕ್ಷ ಪಿಂಚಣಿದಾರರು ಇದರ ಲಾಭ ಪಡೆಯಲಿದ್ದಾರೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.